ಮೈಸೂರು : ನಗರದ ನಜರ್‌ಬಾದ್ ಠಾಣೆಯ ಪೊಲೀಸರು ಇಬ್ಬರು ಕನ್ನ ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ಒಟ್ಟು ೧೭ ಲಕ್ಷ ರೂ ಮೌಲ್ಯದ ೨೪೫ ಗ್ರಾಂ ಚಿನ್ನಾಭರಣ, ೨ ಕೆ.ಜಿ ೫೦೦ ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಸಿದ್ದಾರ್ಥನಗರ ಸನ್ಮಾರ್ಗ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಳವು ಮಾಡಲಾಗಿತ್ತು. ನಜರ್‌ಬಾದ್ ಪೊಲೀಸರು
ದೂರು ದಾಖಲಿಸಿಕೊಂಡು ಸೆ,೮ ರಂದು ನಂಜನಗೂಡಿನಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ನೀಡಿದ ಸ್ವ ಇಚ್ಛಾ ಹೇಳಿಕೆಯ ಮೇರೆಗೆ ಪ್ರಕರಣಕ್ಕೆ ಸಂಬಂಧಪಟ್ಟ ಮಾಲನ್ನು ಅಮಾನತ್ತು ಪಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಎಂ.ಮಹದೇವಸ್ವಾಮಿ, ಪಿಎಸ್‌ಐ ಶ್ರೀನಿವಾಸ್ ಪಾಟೀಲ್, ಪಿ.ನಟರಾಜು ಪ್ರೊಬೇಷನರಿ ಪಿಎಸ್‌ಐ ಶೇಖ್
ಫಿರೋಜ್, ಟಿಎಂಸಿ ವಿಭಾಗದ ಪಿಎಸ್‌ಐ ಚಂದ್ರಶೇಖರ್ ರಾವ್, ಸಿಬ್ಬಂದಿ ಎಂ.ಪ್ರದೀಪ್, ಠಾಣಾ ಸಿಬ್ಬಂದಿಗಳಾದ ವಿ.ವಿ.ಪ್ರಕಾಶ್, ಹೆಚ್.ರಮೇಶ್, ಎಸ್.ಪಿ. ಸತೀಶ್‌ಕುಮಾರ್, ಎಂ. ಸಂಜು, ವೆಂಕಟೇಶ್, ಮೊಹಮ್ಮದ್ ಇಸ್ಮಾಯಿಲ್, ಪ್ರವೀಣ್ ಮತ್ತು ತಾಂತ್ರಿಕ ವಿಭಾಗದ ಕುಮಾರ್ ರವರು ದಾಳಿಯಲ್ಲಿ ಭಾಗವಹಿಸಿದ್ದರು.