ಮದ್ದೂರು: ತಾಲೂಕಿನ ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವುದಿರಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯ ಬಳಿ ಕೃಷಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ರೈತರಿಗೆ ಬಿತ್ತನೆಗೆ ತೊಂದರೆಯಾಗದಂತೆ ರೀತಿಯಲ್ಲಿ ಭತ್ತ, ರಾಗಿ ಸೇರಿದಂತೆ ಹಲವಾರು ಬೆಳೆಗಳ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಬಿತ್ತನೆ ಬೀಜಗಳನ್ನು ಪಡೆದುಕೊಂಡು ಉತ್ತಮವಾಗಿ ಫಸಲು ಪಡೆದು ಆಥರ್ಿಕವಾಗಿ ಸದೃಢರಾಗಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿದರು.
ವರುಣನ ಕೃಪೆಯಿಂದ ಉತ್ತಮವಾಗಿ ಮಳೆಯಾಗುತ್ತಿದೆ, ಜಿಲ್ಲೆಯ ಜೀವನಾಡಿಯಾದ ಕೆ ಆರ್ ಎಸ್ ಜಲಾಶಯ ಕೂಡಾ ಭತರ್ಿಯಾಗಿರುವುದು ಸಂತಸದ ವಿಷಯ, ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಜು.29 ಕ್ಕೆ ಬಾಗಿನಾ ಅಪರ್ಿಸಲಿದ್ದಾರೆ ಎಂದರು.
ಈಗಾಗಲೇ ರೈತರು ಭಿತ್ತನೆ ಕಾರ್ಯವನ್ನು ಆರಂಭಿಸಲು ತಮ್ಮ ಜಮೀನುಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ 25 ಕೆಜಿ ಬಿತ್ತನೆ ಭತ್ತ ಹಾಗೂ 5 ಕೆಜಿ ಭಿತ್ತನೆ ರಾಗಿಯನ್ನು ವಿತರಿಸಲಾಗುತ್ತದೆ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರೈತರು ಕೃಷಿಯಲ್ಲಿ ಯಶಸ್ಸು ಸಾಧಿಸಬೇಕು ಮತ್ತು ಆಥರ್ಿಕವಾಗಿ ಬಲಿಷ್ಟವಾಗಬೇಕು ಎಂಬ ಉದ್ದೇಶದಿಂದ ಸಕರ್ಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರ ಸದ್ಬಳಕೆ ಮಾಡಿಕೊಂಡು ರೈತರು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಉಪ ನಿದರ್ೇಶಕಿ ಮಾಲತಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಎಂಟಿಯು 1001, ಆರ್ಎನ್ಆರ್ 15048 ಭತ್ತದ ಬಿತ್ತನೆ ಬೀಜ ಹಾಗೂ ಕೆಎಂಆರ್ 301, ಎಂಆರ್6, ಎಂಎಲ್ 365, ಜಿಪಿಯು 28 ರಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ. ರಾಗಿ 15 ಕ್ವಿಂಟಾಲ್, ಭತ್ತ 70 ಕ್ವಿಂಟಾಲ್ ಅಗತ್ಯ ದಾಸ್ತಾನು ಇದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿದರ್ೇಶಕಿ ಪ್ರತಿಭಾ, ಕೃಷಿ ಅಧಿಕಾರಿಗಳಾದ ರೂಪಶ್ರೀ, ದಯಾನಂದ್, ಗಾವಾಸ್ಕರ್, ಕೃಷ್ಣೇಗೌಡ, ವಿಜಯ್ಕುಮಾರ್ ಸೇರಿದಂತೆ ಇತರರು ಇದ್ದರು.