Friday, April 11, 2025
Google search engine

Homeರಾಜ್ಯಸುದ್ದಿಜಾಲಬಸವ ಭವನದ ಕಾಮಗಾರಿಗೆ ಸರ್ಕಾರದಿಂದ ಅಗತ್ಯ ಅನುದಾ‌ನ: ಸಚಿವ ಈಶ್ವರ ಬಿ ಖಂಡ್ರೆ ಭರವಸೆ

ಬಸವ ಭವನದ ಕಾಮಗಾರಿಗೆ ಸರ್ಕಾರದಿಂದ ಅಗತ್ಯ ಅನುದಾ‌ನ: ಸಚಿವ ಈಶ್ವರ ಬಿ ಖಂಡ್ರೆ ಭರವಸೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ಮುಂದುವರಿದ ಕಾಮಗಾರಿಗೆ ಸರ್ಕಾರದಿಂದ ಅಗತ್ಯ ಅನುದಾ‌ನ ಕೊಡಿಸುವುದರ ಜತೆಗೆ ವೈಯುಕ್ತಿಕ ವಾಗಿಯು ಧನ ಸಹಾಯ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.

ಸೋಮವಾರ ಇಲ್ಲಿನ ಬಸವೇಶ್ವರ ಬಡಾವಣೆಯ ಮಹದೇಶ್ವರ ದೇವಾಲಯದ ಲ್ಲಿ ನಡೆದ ಉತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸುವುದಕ್ಕೂ ಮುಂಚೆ ಭವನ ಅಪೂರ್ಣಗೊಂಡಿರುವ ಬಸವ ಭವನ ಪರಿಶೀಲಿಸಿ ಮಾತನಾಡಿದ ಅವರು ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಕಳೆದ 12 ವರ್ಷ ಗಳಿಂದ ಭವನದ ಕಾಮಗಾರಿ ನಿಂತಿರುವುದರಿಂದ ವೀರಶೈವ ಸಮಾಜದವರು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರ ಚಟುವಟಿಕೆ ನಡೆಸಲು ತೊಂದರೆಯಾಗಿದ್ದು ನೀವು ನಮಗೆ ಸಹಕಾರ ನೀಡಿ ಭವನದ ಕೆಲಸವನ್ನು ಪೂರ್ಣ ಗೊಳಿಸದಬೇಕೆಂದು ಶಾಸಕ ಡಿ.ರವಿಶಂಕರ್ ಸಚಿವರಿಗೆ ಮನವಿ ಸಲ್ಲಿಸಿದರು.

ಇದಕ್ಕುತ್ತರಿಸಿದ ಅರಣ್ಯ ಸಚಿವರು ಎಲ್ಲರೂ ಸೇರಿ ಬಸವ ಭವನದ ಕಾಮಗಾರಿ ಪೂರ್ಣ ಮಾಡಿ ಶೀಘ್ರದಲ್ಲಿಯೇ ಉದ್ಘಾಟಿಸಿ ಅಲ್ಲಿ ವೀರಶೈವ ಸಮಾಜದವರು ಸೇರಿದಂತೆ ಸರ್ವಧರ್ಮದವರು ಸೇರಿ ಸಮಾಜ ಮುಖಿ ಕೆಲಸ ಮಾಡಲು ವೇದಿಕೆ ನಿರ್ಮಾಣ ಮಾಡೋಣ ಎಂದು ನುಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ವೀರಶೈವ ಸಮಾಜದ ಮುಖಂಡರು ಸಚಿವರಿಗೆ ಬಿನ್ನವತ್ತಳೆ ಸಲ್ಲಿಸಿ ಭವನ ಪೂರ್ಣ ಗೊಳಿಸಿ ನಮಗೆ ಸಹಕಾರ ನೀಡಬೇಕು ಎಂದು ಕೋರಿಕೊಂಡರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಜಿ.ಪಂ.ಮಾಜಿ ಸದಸ್ಯ ಬಿ.ಬಸವರಾಜ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಬಗರ್ ಹುಕುಂ ಸಮಿತಿ ಸದಸ್ಯ ಎಲ್.ಪಿ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular