Saturday, April 19, 2025
Google search engine

Homeಸ್ಥಳೀಯಅಂತರ್ಜಾಲ ಜಾಗೃತಿ ಅಗತ್ಯ: ಡಾ ಜಿ.ಬಿ.ಅರವಿಂದ್

ಅಂತರ್ಜಾಲ ಜಾಗೃತಿ ಅಗತ್ಯ: ಡಾ ಜಿ.ಬಿ.ಅರವಿಂದ್

ಮೈಸೂರು: ಅಂತರ್ಜಾಲ ವಂಚನೆಗಳ ಕುರಿತುಜನರಲ್ಲಿ ಜಾಗೃತಿ ಮೂಡಿಸಬೇಕಾದುದು ಅಗತ್ಯ ಎಂದು ಜೆಎಸ್‌ಎಸ್‌ ಎಹೆಚ್‌ಇಆರ್‌ನ ವಿಧಿವಿಜ್ಞಾನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ.ಬಿ.ಅರವಿಂದ್ ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರದ ಐದನೇ ದಿನ ಅಂತರ್ಜಾಲ ಜಾಗೃತಿ ಕುರಿತು ಉಪನ್ಯಾಸ ನೀಡುತ್ತಾ ತಿಳಿಸಿದರು.

ಜಗತ್ತಿನಲ್ಲಿ ಅಂತರ್ಜಾಲ ಬಳಕೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ.ಗ್ರಾಮೀಣ ಪ್ರದೇಶದಲ್ಲಿಶೇ.೬೨ರ ಜನ ಅಂತರ್ಜಾಲ ಬಳಕೆದಾರರಿದ್ದಾರೆ.ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸಹ ತಮ್ಮಅರಿವಿಗೆ ಬಾರದೆ ಸೈಬರ್ ವಂಚನೆಗಳಿಗೆ ಒಳಗಾಗುತ್ತಿರುವುದು ವಿಪರ್ಯಾಸ.ಅಂತರ್ಜಾಲ ಬಳಸುವವರಲ್ಲಿ ಸದ್ಬಳಕೆ ಮಾಡುವವರಿಗಿಂತ, ದುರ್ಬಳಕೆ ಮಾಡುವವರೇ ಹೆಚ್ಚಾಗಿರುವುದು ವಿ?ದನೀಯ.ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಸಾಲ ಸೌಲಭ್ಯ ನೀಡುವ ನೆಪದಲ್ಲಿ, ಬೇರೆ ಬೇರೆರೀತಿಯಆಮಿಷಗಳನ್ನು ಒಡ್ಡಿ ಸೈಬರ್ ವಂಚಕರು ಮೋಸ ಮಾಡುತ್ತಿರುವ ಬಗ್ಗೆ ಜಾಗೃತಿ ವಹಿಸಬೇಕು.ಸೈಬರ್ ಅಪರಾಧಗಳು ಅತೀಹೆಚ್ಚು ಕಂಡುಬರುವರಾಜ್ಯಗಳಲ್ಲಿ ಕರ್ನಾಟಕ ೫ನೇ ಸ್ಥಾನದಲ್ಲಿದೆಎಂದು ತಿಳಿಸಿದರು.

ಸಿರಿಧಾನ್ಯ ಉತ್ಪನ್ನಗಳ ಆರ್ಗ್‌ಟ್ರೀಸಂಸ್ಥೆಯಶ್ರೀ ಮಹೇಶ್ ತೆಂಕಳ್ಳಿಯವರು ಒತ್ತಡದಜೀವನ ಶೈಲಿಯಿಂದನಾನಾ ಖಾಯಿಲೆಗಳಿಗೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ ಸಿರಿಧಾನ್ಯಗಳು ನಮ್ಮ ದೇಹಕ್ಕೆ ಅತ್ಯವಶ್ಯಕ.ನಾವು ಸಕಾರಾತ್ಮಕವಾಗಿ ಆಲೋಚನೆ ಮಾಡಿದ ನಮ್ಮದೈಹಿಕಆರೋಗ್ಯಉತ್ತಮವಾಗಿರುತ್ತದೆ.ಅತಿ ಹೆಚ್ಚಾಗಿ ಕಂಡು ಬರುತ್ತಿರುವ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮಆಹಾರ ಪದ್ಧತಿಯಲ್ಲಿ ಹಣ್ಣು-ತರಕಾರಿಗಳೊಂದಿಗೆ ಸಿರಿಧಾನ್ಯಗಳ ಬಳಕೆ ಸೂಕ್ತವಾದುದು. ಅಲ್ಲದೇಗ್ರಾಮೀಣ ಪ್ರದೇಶದರೈತ ಬಾಂಧವರೂ ಸಹ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.

ವಿಶ್ರಾಂತ ಮುಖ್ಯಇಂಜಿನಿಯರ್ ಹಾಗೂ ಸಂಸ್ಕೃತಿಚಿಂತಕರಾದ ಶಂಕರ್‌ದೇವನೂರುರವರು ಕಾಡು-ಮೇಡು, ವನ್ಯ ಪ್ರಾಣಿಗಳಿರುವವರೆಗೆ ಈ ಭೂಮಿ ನಮಗೆ ಆಶ್ರಯ ನೀಡಬಲ್ಲದು.ಯಂತ್ರ ನಾಗರಿಕತೆ,ಅಭಿವೃದ್ಧಿಯಹೆಸರಿನಲ್ಲಿಪ್ರಕೃತಿಯನ್ನು ಹಾಳು ಮಾಡುತ್ತಿರುವುದುಶೋಚನೀಯ.೨೧ನೇ ಶತಮಾನದ ವಿಜ್ಞಾನಯುಗದಲ್ಲಿದ್ದರೂ ನಮ್ಮ ಮನಸ್ಸುಜಡ ಸ್ಥಿತಿಯಿಂದ ಚೈತನ್ಯ ಸ್ಥಿತಿಗೆ ನಾವು ಹೋಗಬೇಕಾದರೆ ಬಸವಾದಿ ಶರಣರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ತಿಳಿಸಿದರು.
ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಪಾಲ್ಗೊಂಡಿದ್ದರು.ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕಕಾರ್ಯಕ್ರಮ ನೀಡಿದರು.ಶಿಬಿರದಲ್ಲಿ ತುಮಕೂರು, ಬೆಳಗಾವಿ, ಬೆಂಗಳೂರು, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ೭೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular