Wednesday, April 2, 2025
Google search engine

Homeರಾಜ್ಯಕನ್ನಡದ ಅಭಿಮಾನವನ್ನು ಬೆಳೆಸುವ, ಅಳವಡಿಸಿಕೊಳ್ಳುವ ಅಗತ್ಯವಿದೆ: ತಹಶಿಲ್ದಾರ್ ಐ ಇ ಬಸವರಾಜು

ಕನ್ನಡದ ಅಭಿಮಾನವನ್ನು ಬೆಳೆಸುವ, ಅಳವಡಿಸಿಕೊಳ್ಳುವ ಅಗತ್ಯವಿದೆ: ತಹಶಿಲ್ದಾರ್ ಐ ಇ ಬಸವರಾಜು

ಚಾಮರಾಜನಗರ: ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಂಪರೆಗೆ ಪ್ರಾಚೀನ ಇತಿಹಾಸವಿದೆ. ಕನ್ನಡದ ಅಭಿಮಾನವನ್ನು  ಬೆಳೆಸುವ ಹಾಗೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಾಲೂಕು ತಹಶಿಲ್ದಾರ್ ಐ ಇ ಬಸವರಾಜು ತಿಳಿಸಿದರು.

ಅವರು ಪ್ರಜಾಪಿತ ಬ್ರಹ್ಮಕುಮಾರಿಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ದೀಪ ಬೆಳಗಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಸರ್ವರಿಗೂ ಶುಭಾಶಯಗಳು 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಎಲ್ಲಾ ಕಡೆ ಹಬ್ಬದಂತೆ ನಡೆಯುತ್ತಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿ, ಕಲೆ, ಸಂಗೀತ, ನಾಟಕ, ರಂಗ ಭೂಮಿ, ಗಾದೆ, ಒಗಟುಗಳು, ಜನಪದ ಹಾಗೂ ಕನ್ನಡದ ಸಂಸ್ಕೃತಿ ಉಳಿಸಿ ಬೆಳೆಸುವ  ದಿಕ್ಕಿನಲ್ಲಿ ಕಾರ್ಯ ಮಾಡೋಣ. ಕನ್ನಡ ಪತ್ರಿಕೆ, ಪುಸ್ತಕಗಳನ್ನು  ಓದುವ, ಕೊಳ್ಳುವ  ಗುಣ ಬೆಳೆಸಿಕೊಳ್ಳಿ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ  ದಾನೇಶ್ವರಿ ಅಕ್ಕ ರವರು ದಿವ್ಯ ಸಾನಿಧ್ಯ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೂಲಕ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನಮ್ಮ ಭಾಷೆಯ ಉಳಿವಿಗೆ ಶ್ರಮಿಸುತ್ತಿದೆ ಎಂದರು.

ಕಲಾ ಸರಸ್ವತಿ ನಾಟ್ಯ ಸಂಸ್ಥೆ   ಅಕ್ಷತಾ ಜೈನ್ ರವರ ವಿದ್ಯಾರ್ಥಿಗಳು ಕನ್ನಡ ಗೀತೆಗಳ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪರಮೇಶ್ವರಪ್ಪ, ನಂಜುಂಡಸ್ವಾಮಿ, ಅಕ್ಷತಾ ಜೈನ್, ಸುರೇಶ್ ಗೌಡ, ಆರಾಧ್ಯ, ಶಿವಕುಮಾರ್, ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular