ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ ಫಲಿತಾಂಶಗಳನ್ನು ಪ್ರಕಟಿಸಿದೆ. ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೋಂದಾಯಿಸಿದ ಅರ್ಜಿದಾರರು ತಮ್ಮ ಫಲಿತಾಂಶಗಳನ್ನು natboard.edu.inನಲ್ಲಿ ವೀಕ್ಷಿಸಬಹುದು. ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಮಂಡಳಿಯು ಪ್ರಕಟಿಸಿದ್ದು, ಸಮಗ್ರ ಸ್ಕೋರ್ ಕಾರ್ಡ್‌ಗಳನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ.
ಸಾಮಾನ್ಯ, ಇಡಬ್ಲ್ಯುಎಸ್, ಸಾಮಾನ್ಯ-ಪಿಡಬ್ಲ್ಯುಬಿಡಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ವಿವಿಧ ವಿಭಾಗಗಳ ಅಭ್ಯರ್ಥಿಗಳ ಎಂಡಿ, ಎಂಎಸ್, ಡಿಎನ್‌ಬಿ ಮತ್ತು ಡಿಪ್ಲೊಮಾ ಪ್ರೋಗ್ರಾಂಗಳ ಪ್ರವೇಶ ಪರೀಕ್ಷೆಯ ಫಲಿತಾಂಶಗಳ ಜತೆಗೆ ನೀಟ್ ಪಿಜಿ ಕಟ್-ಆಫ್ ಅಂಕಗಳನ್ನೂ ಎನ್‌ಬಿಇಎಂಎಸ್ ಬಿಡುಗಡೆ ಮಾಡಿದೆ.
NEET PG 2024 ಫಲಿತಾಂಶ ಹೀಗೆ ಚೆಕ್ ಮಾಡಿ
- ಎನ್‌ಬಿಇಎಂಎಸ್‌ನ ಅಧಿಕೃತ ವೆಬ್‌ಸೈಟ್ ವಿಳಾಸ natboard.edu.in, nbe.edu.inಗೆ ಭೇಟಿ ನೀಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ.
- ʼDownload NEET PG Resultʼ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ರಿಜಿಸ್ಟ್ರೇಷನ್ ನಂಬರ್, ಪಾಸ್‌ವರ್ಡ್ ಮುಂತಾದ ಅಗತ್ಯ ಮಾಹಿತಿ ನಮೂದಿಸಿ.
- ಬಳಿಕ ʼSubmitʼ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಸ್ಕ್ರೀನ್ ಮೇಲೆ NEET PG 2024 ಫಲಿತಾಂಶ ಮೂಡುತ್ತದೆ.
- ಇದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ತೆಗೆದಿಡಿ.
ಸದ್ಯ ಫಲಿತಾಂಶ ಪ್ರಕಟವಾಗಿದ್ದು, ಇನ್ನು ಮುಂದೆ ಸೀಟು ಹಂಚಿಕೆಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಅಖಿಲ ಭಾರತ ಕೋಟಾ ಸೀಟುಗಳಿಗೆ mcc.nic.in ಮೂಲಕ ಕೌನ್ಸೆಲಿಂಗ್ ನಡೆಸಲಿದ್ದು, ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ವಿವಿಧ ರಾಜ್ಯಗಳ ಏಜೆನ್ಸಿಗಳು ರಾಜ್ಯ ಕೋಟಾದ ನೀಟ್ ಪಿಜಿ ಕೌನ್ಸೆಲಿಂಗ್ ನಡೆಸಲಿವೆ.