Friday, April 11, 2025
Google search engine

Homeರಾಜ್ಯಸುದ್ದಿಜಾಲನೀಟ್ ಅವ್ಯವಹಾರ: ಎನ್ ಎಸ್ ಯು ಐ, ಕಾಂಗ್ರೆಸ್ ಪ್ರತಿಭಟನೆ

ನೀಟ್ ಅವ್ಯವಹಾರ: ಎನ್ ಎಸ್ ಯು ಐ, ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು(ದಕ್ಷಿಣ ಕನ್ನಡ): ನೀಟ್ ಅವ್ಯವಹಾರ ಖಂಡಿಸಿ ವಿಶೇಷ ತನಿಖೆಗೆ ಆಗ್ರಹಿಸಿ ಇಂದು ಮಂಗಳೂರಿನಲ್ಲಿ ಎನ್ ಎಸ್ ಯು ಐ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುಹಾನ್ ಆಳ್ವ, ಪ್ರವೀಣ್ ಚಂದ್ರ ಆಳ್ವ, ಶಶಿಧರ ಹೆಗ್ಡೆ ಸವದ್ ಸುಳ್ಯ ಮೊದಲಾದವರು ಪಾಲ್ಗೊಂಡಿದ್ದರು.

ಪದ್ಮರಾಜ್ ಆರ್.ಪೂಜಾರಿ ಅವರು ಮಾತನಾಡಿ, ಸೀಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕುತಂತ್ರ ನಡೆದಿದೆ. ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪರ ಸದನದಲ್ಲಿ ಮಾತನಾಡಿದಾಗ ಮೈಕ್ ಬಂದ್ ಮಾಡಲಾಗಿದೆ. ಇದು ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ತೋರಿಸಿದ ಅಗೌರವ ಎಂದರು.

ರಮಾನಾಥ ರೈ ಮಾತನಾಡಿ, ಕಳೆದ ಏಳು ವರ್ಷದಲ್ಲಿ 70 ಬಾರಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.‌ ಧರ್ಮದ ಲೇಪದಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ತನಿಖೆಯ ಮೇಲೆಯೂ ನಂಬಿಕೆ ಇಲ್ಲ. ಸುಪ್ರಿಂ ಕೋರ್ಟ್ ನ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದರು. ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

RELATED ARTICLES
- Advertisment -
Google search engine

Most Popular