ಮಂಡ್ಯ: 15 ತಿಂಗಳು ಮೀರಿದರೂ ಕಬ್ಬು ಕಟಾವು ಮಾಡದೆ ಮೈ ಶುಗರ್ ಆಡಳಿತ ವಿಳಂಬ ಮಾಡುತ್ತಿದ್ದು, ಇಂದು ಮೈಷುಗರ್ ಅಧ್ಯಕ್ಷನ ಕಾರಿಗೆ ಮುತ್ತಿಗೆ ಹಾಕಿ ರೈತರು ತರಾಟೆಗೆ ತೆಗೆದುಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ .

ಕೇಳಿದಾಗಲೆಲ್ಲಾ ಇಂದು ನಾಳೆ ಎಂದು ಅಧ್ಯಕ್ಷ ಸಬೂಬ್ ಹೇಳಿಕೊಂಡು ಬರುತ್ತಿದ್ದು, ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಧ್ಯಕ್ಷ ಸಿಡಿ ಗಂಗಾಧರ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷನ ನಿರ್ಲಕ್ಷ ಧೋರಣೆಗೆ ಬೇಸತ್ತಿದ್ದ ರೈತರು ಗ್ರಾಮಕ್ಕೆ ಆಗಮಿಸಿದ ಗಂಗಾಧರ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು . ಕಬ್ಬು ಯಾವಾಗ ಕಟಾವು ಮಾಡ್ತೀರಿ ಈವರೆಗೆ ಯಾಕೆ ಕಟಾವು ಮಾಡಿಲ್ಲ ಎಂದು ಪ್ರಶ್ನಿಸಿ, ರೈತರು ಆಕ್ರೋಶ ಹೊರ ಹಾಕಿದರು. ಗ್ರಾಮಸ್ಥರ ಪ್ರಶ್ನೆಗೆ ಮೈಶುಗರ್ ಅಧ್ಯಕ್ಷ ಸಿಡಿ ಗಂಗಾಧರ್ ಕಕ್ಕಾಬಿಕ್ಕಿಯಾದರು.
ಮೈ ಶುಗರ್ ಅಧ್ಯಕ್ಷನ ಕಾರಿಗೆ ರೈತರು ಮುತ್ತಿಗೆ ಹಾಕಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.