ನಂಜನಗೂಡು: ನಂಜನಗೂಡು ಕೋಳಿ ಅಂಗಡಿ ಮತ್ತು ತರಕಾರಿ ಅಂಗಡಿ ಮಾಲೀಕರು ನಿತ್ಯ ಕೊಳೆತ ತರಕಾರಿಗಳು ಮತ್ತು ಕೋಳಿ ಪುಕ್ಕಗಳು ಕೋಳಿಯ ತ್ಯಾಜ್ಯಗಳನ್ನು ಪ್ರತಿನಿತ್ಯ ರಾತ್ರಿಯ ಸಮಯದಲ್ಲಿ ತಂದು ಕಾಲುವೆಗೆ ಸುರಿತ್ತಿರುವುದರಿಂದ ಕೊಳೆತು ಗಬ್ಬು ನಾರುತ್ತಿದೆ.
ಸಾವಿರಾರು ಮಂದಿ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಪಕ್ಕದಲ್ಲಿ ಶಾಲೆ ಇದೆ. ವಿದ್ಯಾರ್ಥಿಗಳು ಶಿಕ್ಷಕರು ದುರ್ವಾಸನೆಯಿಂದ ನರಳುವ ಸ್ಥಿತಿ ಉಂಟಾಗಿದೆ. ಇದಕ್ಕೆ ಕ್ರಮ ತೆಗೆದುಕೊಳ್ಳದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಕೋಳಿ ಅಂಗಡಿ ಮತ್ತು ತರಕಾರಿ ಅಂಗಡಿಗಳ ಮಾಲೀಕರು ಪ್ರತಿನಿತ್ಯ ಸಾವಿರಾರು ಹಣ ಸಂಪಾದನೆ ಮಾಡಿ, ರಾತ್ರಿ ಸಮಯದಲ್ಲಿ ಕೊಳೆತ ತರಕಾರಿಗಳನ್ನು ಮತ್ತು ಕೋಳಿ ಮಾಂಸಗಳನ್ನು ನಗರಸಭೆ ವತಿಯಿಂದ ಪ್ರತಿನಿತ್ಯ ರಾತ್ರಿ ಬೆಳಿಗ್ಗೆ ವಾಹನಗಳು ತಮ್ಮ ಅಂಗಡಿಯ ಬಳಿ ಬಂದರೂ ಕೂಡ ಹಾಕದೆ ನಗರಸಭೆ ಅಧಿಕಾರಿಗಳಿಗೆ ಬೆಲೆ ನೀಡದೆ ತಮಗಿಷ್ಟ ಬಂದ ರೀತಿ ಸಿಕ್ಕ ಸಿಕ್ಕ ಸ್ಥಳದಲ್ಲಿ ಸುರಿದು ಪಟ್ಟಣದ ಹದಗೆಡಿಸಿ ಹಾಳು ಮಾಡುತ್ತಿದ್ದಾರೆ.
ಪ್ರತಿದಿನ ಬೆಳಿಗ್ಗೆಯ ಸಮಯದಲ್ಲಿ ನಗರಸಭೆಯ ಸಂಬಂಧ ಪಟ್ಟ ಹೆಲ್ತ್ ಇನ್ಸ್ಪೆಕ್ಟರ್ ಪಟ್ಟಣವನ್ನು ಪ್ರತಿದಿನ ಸುತ್ತುತ್ತಾರೆ. ಇದು ಕಂಡು ಕಾಣದಂತೆ ಇರುವುದನ್ನು ಕಂಡು ಇದಲ್ಲದೆ ಅಂಗಡಿ ಮಾಲೀಕರಿಗೆ ದಂಡ ವಿಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೆ ರಸ್ತೆಯಲ್ಲಿ ಶಾಲೆಗಳು ಇವೆ, ಪ್ರತಿನಿತ್ಯ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶಾಲೆಯಲ್ಲಿ ಪಾಠ ಕೇಳುವ ಸ್ಥಿತಿ ಉಂಟಾಗಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. ಆದ್ದರಿಂದ ನಗರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಕಾಲುವೆಗಳಿಗೆ ತ್ಯಾಜ್ಯ ಸುರಿಯುತ್ತಿರುವ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ದಂಡವಿಧಿಸಿ ಲೈಸೆನ್ಸ್ ರದ್ದು ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕ್ರಮ ಕೈಗೊಳ್ಳದಿದ್ದರೆ ಕಸವನ್ನು ನಗರಸಭೆ ಮುಂಭಾಗ ಸುರಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೌರಕಾರ್ಮಿಕರು ಮನುಷ್ಯರು. ಅವರಿಗೂ ಕುಟುಂಬ ಮಕ್ಕಳು ಹೆಂಡತಿ ತಾಯಿ ತಂದೆ ಇದ್ದಾರೆ.
ನಮ್ಮ ಊರು, ನಮ್ಮ ಸ್ಥಳ, ನಮ್ಮ ಜಾಗ, ನಮ್ಮ ಶಾಲೆ ಎಂಬುದನ್ನು ಅರಿತು ಕಂಡ ಕಂಡಲ್ಲಿ ಕಸ ಹಾಕದೆ ನಗರಸಭೆ ಅಧಿಕಾರಿಗಳು ತಿಳಿಸುವಾಗ ಮನೆ ಮುಂದೆ ಬಂದಂತಹ ವಾಹನಗಳಿಗೆ ಕಸವನ್ನು ನೀಡಿ, ನಮ್ಮ ನಗರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.