Saturday, April 19, 2025
Google search engine

Homeಅಪರಾಧಪೋಷಕರ ನಿರ್ಲಕ್ಷ್ಯ : ವಿದ್ಯುತ್ ಶಾಕ್‌ಗೆ 8 ತಿಂಗಳ ಮಗು ಬಲಿ

ಪೋಷಕರ ನಿರ್ಲಕ್ಷ್ಯ : ವಿದ್ಯುತ್ ಶಾಕ್‌ಗೆ 8 ತಿಂಗಳ ಮಗು ಬಲಿ

ಉತ್ತರ ಕನ್ನಡ: ಮೊಬೈಲ್ ಚಾರ್ಜರ್‌ನಿಂದ ಶಾಕ್ ಹೊಡೆದು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ.
ಪೋಷಕರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ 8 ತಿಂಗಳ ಮಗು ಸಾನಿಧ್ಯ ವಿದ್ಯುತ್ ಶಾಕ್‌ಗೆ ಬಲಿಯಾಗಿರುವುದು. ಮೊಬೈಲ್​ ಚಾರ್ಜ್​ಗೆ ಹಾಕಿ ಪೋಷಕರು ಆಫ್​ ಮಾಡದೇ ಇಟ್ಟಿದ್ದರು. ಈ ವೇಳೆ ಆನ್ ​ಇದ್ದ ಚಾರ್ಜರ್ ಅ​ನ್ನು​ ಮಗು ಬಾಯಲ್ಲಿಟ್ಟುಕೊಂಡಿದ್ದು ಈ ಸಮಯದಲ್ಲಿ ಶಾಕ್​ನಿಂದ ಮಗು ಕೊನೆಯುಸಿರೆಳದಿದೆ.
ಮಗುವಿನ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular