‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ವೆಸ್ಟರ್ನ್ ಸ್ಟೈಲಿನಲ್ಲಿ ಬೇಬಿ ಶವರ್ ಫಂಕ್ಷನ್ ಜರುಗಿದೆ. ಇದರ ಸುಂದರ ವಿಡಿಯೋವೊಂದನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ನೇಹಾ ಹುಟ್ಟುಹಬ್ಬದ ಜೊತೆ ಬೇಬಿ ಶವರ್ ಫಂಕ್ಷನ್ ಗ್ರ್ಯಾಂಡ್ ಆಗಿ ನಡೆದಿದೆ. ಪತಿ ಚಂದನ್ ಜೊತೆ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಲೈಟ್ ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಈ ವೇಳೆ, ಸಹೋದರಿ ಸೋನು ಗೌಡ, ಸ್ನೇಹಿತೆ ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಅದಷ್ಟೇ ಅಲ್ಲ, ಇತ್ತೀಚೆಗೆ ಟ್ರೆಡಿಶನಲ್ ಆಗಿ ನೇಹಾ ಸೀಮಂತ ಶಾಸ್ತ್ರ ಕೂಡ ಜರುಗಿದೆ. ಸೀರೆಯುಟ್ಟು ಬೇಬಿ ಬಂಪ್ ತೋರಿಸುತ್ತಾ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ, ಅನುಪಮಾ, ಚೈತ್ರಾ ವಾಸುದೇವನ್, ನಮ್ರತಾ ಗೌಡ, ಕವಿತಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.