Friday, April 18, 2025
Google search engine

Homeರಾಜ್ಯನೇಹಾ ಕೊಲೆ ಪ್ರಕರಣ: ಮತಾಂತರಕ್ಕೆ ಯತ್ನಿಸಿದ್ದ ಫಯಾಜ್; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

ನೇಹಾ ಕೊಲೆ ಪ್ರಕರಣ: ಮತಾಂತರಕ್ಕೆ ಯತ್ನಿಸಿದ್ದ ಫಯಾಜ್; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

 ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ ಆರೋಪಿ ಫಯಾಜ್ ಯತ್ನಿಸಿದ್ದ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದು, ಹಿಗಾಗಿ ಆ ಆಯಾಮದಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೇಹಾ ಮತಾಂತರ‌ ಮಾಡಲು ಫಯಾಜ್ ಯತ್ನಿಸಿದ್ದ. ಈ ಬಗ್ಗೆ ನೇಹಾ ತಂದೆ ನಿರಂಜನ ಹಿರೇಮಠ ಕೂಡ ಆರೋಪ ಮಾಡಿದ್ದಾರೆ. ನೇಹಾ ಕೊಲೆ ಕೇಸ್ ಲವ್ ಅ್ಯಂಗಲ್​​ನಲ್ಲಿಯೇ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನಿಲುವು ಅನ್ನೋದಕ್ಕೆ ನೇಹಾ ಹಿರೇಮಠ ಪ್ರಕರಣವೂ ಒಂದು. ನೇಹಾ ತಂದೆ ನಿರಂಜನ ನೀವೇ ನ್ಯಾಯ ಕೊಡಿಸಬೇಕು ಅಂದಿದ್ದರು. ಹೀಗಾಗಿ ನಾವು ಸಂವೇದಾನಶೀಲದಿಂದ ಹೋರಾಟ ಮಾಡಿದೆವು. ಕಾಂಗ್ರೆಸ್ ಪಕ್ಷದವರು ಅಸಭ್ಯ, ಅಸಡ್ಡೆಯಿಂದ ಮಾತನಾಡಿದರು. ‘ಹೇ ಅದೇನ್ ಬಿಡ್ರೀ’ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜನರ ಜೀವದ ಜೊತೆ ಚೆಲ್ಲಾಟ ಆಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಇವರ ಡಬಲ್ ಸ್ಟ್ಯಾಂಡರ್ಡ್ ಎಂದು ಜೋಶಿ ಕಿಡಿಕಾರಿದರು.

ಕರ್ನಾಟಕದಲ್ಲಿ ಮುಸ್ಲಿಮರಿಗೆ ಯಾಕೆ ಧರ್ಮಾಧಾರಿತ ಮೀಸಲಾತಿ ಕೊಟ್ಟಿದೀರಿ ಎಂದು ಕಾಂಗ್ರೆಸ್​ ಪಕ್ಷವನ್ನು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಹಿಂದುಳಿದ ದಲಿತರ, ಮೀಸಲಾತಿಯನ್ನು ಮುಸ್ಲಿಮರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕಕ್ಕೆ ಕೊಟ್ಟವರು ನೀವೇ, ಕರ್ನಾಟಕಕ್ಕೆ ನೀವು ವಸೂಲಿಗೆ ಬರುತ್ತೀರಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular