Friday, April 4, 2025
Google search engine

Homeರಾಜ್ಯನೇಹಾ ಕೊಲೆ ಪ್ರಕರಣ: ಕಾಂಗ್ರೆಸ್ ವಿರುದ್ಧ ನಿರಂಜನಯ್ಯ ಹಿರೇಮಠ ಗಂಭೀರ ಆರೋಪ

ನೇಹಾ ಕೊಲೆ ಪ್ರಕರಣ: ಕಾಂಗ್ರೆಸ್ ವಿರುದ್ಧ ನಿರಂಜನಯ್ಯ ಹಿರೇಮಠ ಗಂಭೀರ ಆರೋಪ

ಹುಬ್ಬಳ್ಳಿ: ಹುಬ್ಬಳ್ಳಿಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ನೇಹಾ ಕೊಲೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ನೇಹಾ ತಂದೆ ನಿರಂಜನಯ್ಯ ಹಿರೇಮಠ ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರಾಜಕೀಯ ಷಡ್ಯಂತ್ರದಿಂದ ನನ್ನ ಮಗಳ ಕೊಲೆಯಾಗಿದ್ದು, ನೂರಕ್ಕೆ ನೂರರಷ್ಟು ನಮ್ಮ ಪಕ್ಷದ ಮುಖಂಡರೇ ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಷಡ್ಯಂತ್ರ ನಡೆಸುತ್ತಿದ್ದಾರೆ ಎಂದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿ ಕೋರ್ಟ್ ಅವಶ್ಯಕತೆಯಿಲ್ಲವೆಂದು ಗೃಹಸಚಿವ ಪರಮೇಶ್ವರ್ ಹೇಳಿಕೆ ನನಗೆ ಆಶ್ಚರ್ಯ ಮತ್ತು ಅಷ್ಟೇ ದುಃಖ ತಂದಿದೆ. ಸರ್ಕಾರದ ಪತ್ರದ ಮೂಲಕ ತ್ವರಿತಗತಿ ಕೋರ್ಟ್ ಮಾಡುತ್ತೇವೆಂದಿತ್ತು. ಸಿಎಂ, ಕಾನೂನು ಸಚಿವರು ಬಂದು ಸರ್ಕಾರದ ಪತ್ರವನ್ನು ತೋರಿಸಿದ್ದರು.

ನನ್ನ ಮಗಳು ನೇಹಾ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇಂತಹ ಪೈಶಾಚಿಕ ಕೃತ್ಯದ ಬಗ್ಗೆ ಗೃಹಸಚಿವರ ಹೇಳಿಕೆ ಸಮಂಜಸವಲ್ಲ. ಈ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಕಳಂಕ ತರಲಿದೆ. ನಾನು ಕಾರ್ಪೊರೇಟರ್, ಕಾಂಗ್ರೆಸ್ ಕಾರ್ಯಕರ್ತನಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular