Wednesday, April 9, 2025
Google search engine

Homeರಾಜ್ಯಸುದ್ದಿಜಾಲನೆರೆಹಾವಳಿ:ಶಾಸಕ ಭರತ್ ಶೆಟ್ಟಿ ವೈ ನೇತೃತ್ವದಲ್ಲಿಎಸ್ ಡಿ ಆರ್ ಎಫ್ ತಂಡದಿಂದ ಸುರಕ್ಷತೆಯ ಕ್ರಮ

ನೆರೆಹಾವಳಿ:ಶಾಸಕ ಭರತ್ ಶೆಟ್ಟಿ ವೈ ನೇತೃತ್ವದಲ್ಲಿಎಸ್ ಡಿ ಆರ್ ಎಫ್ ತಂಡದಿಂದ ಸುರಕ್ಷತೆಯ ಕ್ರಮ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದ್ಯಪಾಡಿ ಗ್ರಾಮದ ಕುದ್ರು( ಮುಗೇರ್) ಮತ್ತು ದೈವಂಗಲ ಗುಡ್ಡೆ ಭಾಗವು ನೆರೆಯಿಂದ ಆವೃತವಾಗಿದೆ. ಸುಮಾರು 25 ಮನೆ, 15 ಹಸುಗಳು ಸಿಲುಕಿಕೊಂಡಿದ್ದು ಶಾಸಕ ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಎಸ್ ಡಿ ಆರ್ ಎಫ್ ತಂಡವು ಸ್ಥಳಕ್ಕೆ ಬಂದಿದ್ದು ಸುರಕ್ಷತೆಯ ಕ್ರಮ ಕೈಗೊಳ್ಳಲಾಗಿದೆ.

ಪಂಚಾಯತ್ ವತಿಯಿಂದ ಎಲ್ಲಾ ತಕ್ಷಣದ ವ್ಯವಸ್ಥೆ ಮಾಡಲಾಗುತ್ತಿದೆ. ಶಾಸಕ ಭರತ್ ಶೆಟ್ಟಿ ವೈ ಅವರು ದೋಣಿ ಮೂಲಕವೇ ಸಂಚರಿಸಿ ನದಿ ಒಳಹರಿವಿನ ಪ್ರಮಾಣ ಹೆಚ್ಚುತ್ತಿದ್ದು,ಸ್ಥಳಾಂತರ ಮಾಡುವಂತೆ ಮನೆಯವರಲ್ಲಿ ಮನವಿ ಮಾಡಿದರು.

ಮನೆಯಲ್ಲಿನ ಹಸು,ಪ್ರಾಣಿಗಳನ್ನು ತೊರೆದು ಹೋಗಲು ಹಲವು ಮಂದಿ ನಿರಾಕರಿಸಿದರಾದರೂ‌,ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿ ಮನವೊಲಿಸಲಾಯಿತು. ಜಿಲ್ಲಾ ಪಂಚಾಯತ್ ವತಿಯಿಂದ ದನಕರುಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಯಿತು. ಸಹಾಯಕ ಆಯುಕ್ತ ಹರ್ಷವರ್ಧನ, ತಹಶೀಲ್ದಾರ್,ಕಂದಾಯ ,ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಸಕರ ಜತೆಗಿದ್ದರು.

RELATED ARTICLES
- Advertisment -
Google search engine

Most Popular