ಮಂಗಳೂರು(ದಕ್ಷಿಣ ಕನ್ನಡ): ನೇತ್ರಾವತಿ ಸೇತುವೆಯಿಂದ ಬೋಳಾರ ಸೀಫೇಸ್‌ವರೆಗಿನ 2.1 ಕಿ.ಮೀ. ಉದ್ದದ ನೇತ್ರಾವತಿ ಜಲಾಭಿಮುಖ ಯೋಜನೆ ಬಗೆಗಿನ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯರ ಸಭೆ ನಡೆಸಬೇಕು ಎಂದು ಸಿಟಿಝನ್ ಫೋರಂ ಫೋರ್ ಜಸ್ಟಿಸ್ ಆಗ್ರಹಿಸಿದೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅತಾವುಲ್ಲ ರಹ್ಮಾನ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈಗಾಗಲೇ ಹಲವು ರಸ್ತೆಗಳು, ಕಾಲುದಾರಿಗಳು, ಉದ್ಯಾನವನ, ಕೆರೆ, ಸ್ಮಾರ್ಟ್ ಬಸ್ ನಿಲ್ದಾಣ, ಇ-ಶೌಚಾಲಯಗಳನ್ನು ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ.
ಇದೀಗ 70 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿರುವ ನೇತ್ರಾವತಿ ಜಲಾಭಿಮುಖ ಯೋಜನೆಯ ಕುರಿತಂತೆ ಸ್ಥಳೀಯ ಖಾಸಗಿ ಜಮೀನು, ಬೋಟ್ ಾರ್ಡ್‌ಗಳನ್ನು ಹೊಂದಿರುವವರು, ಬಂದರು ಭೂಮಿಯನ್ನು ಲೀಸ್ ಮೇಲೆ ಪಡೆದವರಿಗೆ ಸಮರ್ಪಕ ಮಾಹಿತಿಯನ್ನು ನೀಡದೆ, ಏಕಾಏಕಿ ನೊಟೀಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.