Friday, April 11, 2025
Google search engine

Homeರಾಜ್ಯಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಬೆಂಗಳೂರು ವಿವಿಯಿಂದ ಹೊಸ ಕ್ರಮ; ಪರೀಕ್ಷೆಗೆ 30 ನಿಮಿಷಕ್ಕೆ ಮುನ್ನ...

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಬೆಂಗಳೂರು ವಿವಿಯಿಂದ ಹೊಸ ಕ್ರಮ; ಪರೀಕ್ಷೆಗೆ 30 ನಿಮಿಷಕ್ಕೆ ಮುನ್ನ ಆನ್​ಲೈನ್​ ಮೂಲಕ ಪೂರೈಕೆ ವ್ಯವಸ್ಥೆ

ಬೆಂಗಳೂರು: ಬಿಇಡಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ವಿವಿ ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ ಆನ್ ​ಲೈನ್ ​ನಲ್ಲಿ ಪತ್ರಿಕೆಗಳನ್ನು ವಿತರಿಸಲಿದೆ. ಹೊಸ ವ್ಯವಸ್ಥೆ ಅಡಿ ಕಾಲೇಜುಗಳಿಗೆ ಪರೀಕ್ಷೆ ಆರಂಭಕ್ಕೆ ಕೇವಲ 30 ನಿಮಿಷಕ್ಕೆ ಮುನ್ನ ಎನ್​ಕ್ರಿಪ್ಟ್​ ಮಾಡಿದ ಪ್ರತಿಗಳನ್ನು ನೀಡಲಾಗುವುದು ಈ ಮೂಲಕ ಪರೀಕ್ಷೆ ಪತ್ರಿಕೆಯ ಮುದ್ರಣ ಮತ್ತು ವಿತರಣೆಯನ್ನು ಭದ್ರಪಡಿಸಲು ಕ್ರಮವಹಿಸಲಾಗಿದೆ.

ವಿಶೇಷವಾಗಿ ಬಿಇಡಿ​ ಪರೀಕ್ಷೆಗಳಲ್ಲಿ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯ ಬೆಂಗಳೂರು ವಿವಿ ಅಡಿ 30 ಬಿಇಡಿ​​ ಕಾಲೇಜುಗಳಿದ್ದು, 6,000 ವಿದ್ಯಾರ್ಥಿಗಳು ಸೆಮಿಸ್ಟರ್​ ಪರೀಕ್ಷೆ ಎದುರಿಸಲಿದ್ದಾರೆ. ಬೆಂಗಳೂರು ವಿವಿ ಅನುಸಾರ, ನ್ಯಾಷನಲ್​ ಕೌನ್ಸಿಲ್​ ಫಾರ್​ ಟೀಚರ್​ ಎಜುಕೇಷನ್​ (ಎನ್​ಸಿಟಿಇ) ನಾಲ್ಕು ವರ್ಷದ ಬಿಎಡ್​ ಕಾರ್ಯಕ್ರಮವನ್ನು ಅಧಿಕೃತಗೊಳಿಸಿದೆ. ಆದರೆ, ಬಹುತೇಕ ಸಂಸ್ಥೆಗಳು ಎರಡು ವರ್ಷದ ಕೋರ್ಸ್​​ ನೀಡುವುದನ್ನು ಮುಂದುವರೆಸಿದೆ. ಪ್ರತಿ ಸೆಮಿಸ್ಟರ್​ನಲ್ಲಿ ಪ್ರಶ್ನೆ ಪತ್ರಿಕೆ ಮುದ್ರಿಸಿ ಮತ್ತು ವಿತರಣೆ ಮಾಡಲಾಗುತ್ತಿತ್ತು. ಇದೀಗ ಆನ್​ಲೈನ್​ ಮೂಲಕ ಯಾವುದೇ ಅಕ್ರಮ ಇಲ್ಲದೇ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮುಂದಾಗಿದೆ.

ಬಿಎಡ್​​ ಕಾಲೇಜಿನ ಪರೀಕ್ಷ ಅಕ್ರಮದ ಆರೋಪವನ್ನು ಸದ್ಯ ವಿವಿ ಮೇಲ್ವಿಚಾರಣೆ ಮಾಡುತ್ತಿದೆ. ಅದರಲ್ಲೂ ತರಗತಿಗೆ ಹಾಜರಾಗದೇ ಪರೀಕ್ಷೆಗೆ ಮಾತ್ರ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಕೆಲವು ಸಂಸ್ಥೆಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶ ಮಾಡಿಕೊಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆ ಡಿಜಿಟಲ್​ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಡಿಜಿಟಲ್​ ವಿತರಣೆ ಆರಂಭದಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಬಿಇಡಿ​​ ಕಾಲೇಜುಗಳಿಗೆ ಸೀಮಿತವಾಗಿದೆ. ಈ ವ್ಯವಸ್ಥೆ ಇಲ್ಲಿ ಯಶಸ್ವಿಯಾದರೆ, ಇದನ್ನೂ ಪದವಿ ಕೋರ್ಸ್​ಗಳಿಗೂ ಅಳವಡಿಸಲು ವಿವಿ ಚಿಂತನೆ ನಡೆಸಿದೆ.

ಹೇಗೆ ನಿರ್ವಹಣೆ?: ಹೊಸ ಪ್ರಕ್ರಿಯೆಯಲ್ಲಿ ಪ್ರಶ್ನೆ ಪತ್ರಿಕೆ ಪಡೆಯಲು ಕಾಲೇಜು ಪ್ರಾಂಶುಪಾಲರಿಗೆ ಲಾಗಿನ್​ ಐಡಿ ನೀಡಲಾಗುವುದು. ಪ್ರಾಂಶುಪಾಲರು ಒನ್​ ಟೈಮ್​ ಪಾಸ್ವರ್ಡ್​ ಮೂಲಕ ಅದನ್ನು ನಮೂದಿಸಬೇಕು. ಪರೀಕ್ಷೆಗೆ 30 ನಿಮಿಷ ಮುನ್ನ ಪತ್ರಿಕೆಯನ್ನು ಕಳುಹಿಸಲಾಗುವುದು ಅದರ ಪ್ರಿಂಟ್​ ಅನ್ನು ಅಲ್ಲಿಯೇ ಪಡೆದು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇಲ್ಲಿ ಅಕ್ರಮ ತಡೆಯುವ ಉದ್ದೇಶದ ಸಾಫ್ಟ್​ವೇರ್​ ಅಭಿವೃದ್ಧಿ ಪಡಿಸಲಾಗಿದೆ.

ಈ ಕುರಿತು ಮಾತನಾಡಿರುವ ಬಿಎಡ್​​ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಇದು ಅಕ್ರಮ ತಡೆಯುವಲ್ಲಿ ಪ್ರಮುಖ ಸಕಾರಾತ್ಮಕ ಹೆಜ್ಜೆಯಾಗಿದೆ. ಹೊಸ ವ್ಯವಸ್ಥೆಯು ಸೋರಿಕೆ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯಲ್ಲಿ ಎನ್‌ಕ್ರಿಪ್ಶನ್ ಮತ್ತು ಪಾಸ್‌ವರ್ಡ್ ನವೀಕರಣ ಹೊಂದಿರುವುದು ಬಹಳ ಮುಖ್ಯ ಎಂದರು.

ಬೆಂಗಳೂರು ವಿವಿ ಈ ಹಿಂದೆ ಪಿಯು ಪೂರಕ ಪರೀಕ್ಷೆಯಲ್ಲಿ ಇದೆ ವಿಧಾನ ಅನುಸರಿಸಿದರೂ, ಬಳಿಕ ಇದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಡಿಜಿಟಲ್​ ತಂತ್ರಜ್ಞಾನದ ಮೊರೆ ಹೋಗಿದೆ. ಈ ಮೂಲಕ ಪರೀಕ್ಷೆ ಪ್ರಕ್ರಿಯೆ ಮತ್ತು ಅಕ್ರಮ ಚಟುವಟಿಕೆ ತಡೆಯುವ ಗುರಿ ಹೊಂದಲಾಗಿದೆ.

RELATED ARTICLES
- Advertisment -
Google search engine

Most Popular