ನವ ದೆಹಲಿ: ಹೊಸ ಕ್ರಿಮಿನಲ್ ಕಾನೂನುಗಳು ಸಂತ್ರಸ್ತರ ಪರ ಮತ್ತು ನ್ಯಾಯ ಆಧಾರಿತವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಸಂಸತ್ತಿನ ಗ್ರಂಥಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ದೇಶ ಸ್ವಾತಂತ್ರ್ಯ ಪಡೆದು ಸರಿಸುಮಾರು 77 ವರ್ಷಗಳ ನಂತರ, ಅಪರಾಧ ನ್ಯಾಯ ವ್ಯವಸ್ಥೆಯು ಈಗ ಸಂಪೂರ್ಣವಾಗಿ ‘ಸ್ವದೇಶಿ’ ಆಗಿದ್ದು, ಭಾರತೀಯ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. 75 ವರ್ಷಗಳ ನಂತರ ವಸಾಹತುಶಾಹಿ ಕಾನೂನುಗಳನ್ನು ಭಾರತೀಯ ಸಂಸತ್ತು ಜಾರಿಗೆ ತಂದ ಹೊಸ ಕಾನೂನುಗಳೊಂದಿಗೆ ಜುಲೈ 1 ರ ಸೋಮವಾರದಿಂದ ಜಾರಿಗೆ ಬಂದಿದೆ ಎಂದು ಅವರು ಒತ್ತಿ ಹೇಳಿದರು.
ಇಂದು ಜುಲೈ 1ರಂದು ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳು ಭಾರತದಲ್ಲಿ ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿದೆ, ಅಪರಾಧ ನ್ಯಾಯ ವ್ಯವಸ್ಥೆಯನ್ನು ‘ಸಂಪೂರ್ಣವಾಗಿ ಸ್ವದೇಶಿ’ ಆಗಿ ಪರಿವರ್ತಿಸಿದೆ, ಇದು ಭಾರತೀಯ ನೀತಿಯಲ್ಲಿ ಹುದುಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಶಿಕ್ಷೆಯ ಬದಲಿಗೆ ನ್ಯಾಯ, ತ್ವರಿತ ವಿಚಾರಣೆ ಮತ್ತು ವಿಳಂಬದ ಜಾಗದಲ್ಲಿ ನ್ಯಾಯ ಒದಗಿಸಲಾಗುವುದು, ಮೊದಲು ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿತ್ತು, ಆದರೆ ಈಗ ಸಂತ್ರಸ್ತರ ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುವುದು ಎಂದು ಹೇಳಿದರು.
ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ 22.5 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು 12,000 ಮಾಸ್ಟರ್ ಟ್ರೈನರ್‌ಗಳನ್ನು ನಿಯೋಜಿಸಲಾಗಿದೆ ಎಂದರು. ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳು ಅಪರಾಧಗಳು ನಡೆಯುವುದನ್ನು ಕಡಿಮೆ ಮಾಡುತ್ತವೆ. ಹೊಸ ಕಾನೂನುಗಳ ಅಡಿಯಲ್ಲಿ ಶೇಕಡಾ 90ರಷ್ಟು ಶಿಕ್ಷೆಯ ಪ್ರಮಾಣವನ್ನು ಕಾಣಬಹುದು ಎಂದರು.