Friday, April 4, 2025
Google search engine

Homeಅಪರಾಧನವದೆಹಲಿ: 350 ರೂ.ಗಾಗಿ ಯುವಕನನ್ನು  60ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಪ್ರಾಪ್ತ

ನವದೆಹಲಿ: 350 ರೂ.ಗಾಗಿ ಯುವಕನನ್ನು  60ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಪ್ರಾಪ್ತ

ನವದೆಹಲಿ: ಕೇವಲ 350 ರೂಪಾಯಿಗೋಸ್ಕರ 16 ವರ್ಷದ ಬಾಲಕನೋರ್ವ 18 ವರ್ಷದ ಯುವಕನನ್ನು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ 60ಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದ ಭೀಬತ್ಸ ಘಟನೆ ಈಶಾನ್ಯ ದೆಹಲಿಯ ವೆಲ್‌ಕ ಮ್‌ ನ ರಸ್ತೆಯಲ್ಲಿ ನಡೆದಿದೆ.

ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಕೈಯಲ್ಲಿ ಚಾಕು ಹಿಡಿದಿರುವ ಬಾಲಕ ಯುವಕನ ಮೇಲೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ ಅಲ್ಲದೆ ಅಲ್ಲಿನ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟು ಮಾತ್ರವಲ್ಲದೆ ಹತ್ಯೆಗೈದ ಬಾಲಕ ಶವದ ಬಳಿ ನಿಂತು ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.

ಕೆಲ ಹೊತ್ತಿನ ಬಳಿಕ ಬಾಲಕ ಅಲ್ಲಿಂದ ತೆರಳಿದ್ದು, ಆ ಬಳಿಕ ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಯುವಕನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸರು ಬಾಲಕ ಯುವಕನನ್ನು ಹತ್ಯೆಗೈಯುವ ಮೊದಲು ಹಣಕ್ಕಾಗಿ ಪೀಡಿಸಿದ್ದು, ಯುವಕ ಹಣ ಕೊಡಲು ನಿರಾಕರಿಸಿದ ಕಾರಣ ಕುಪಿತಗೊಂಡ ಬಾಲಕ ಯುವಕನ ಕತ್ತು ಹಿಸುಕಿದ್ದಾನೆ. ಈ ವೇಳೆ ಪ್ರಜ್ಞೆ ತಪ್ಪಿದ ಯುವಕನ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಅಲ್ಲದೆ ನಶೆಯ ಮತ್ತಿನಲ್ಲಿ ಯುವಕನ ದೇಹದ ಬಳಿ ನಿಂತು ನೃತ್ಯ ಮಾಡಿದ್ದಾನೆ ಇದೆಲ್ಲಾ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾದ ದೃಶ್ಯಾವಳಿಯ ಆಧಾರದ ಮೇಲೆ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular