ಬೆಂಗಳೂರು : ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದು, ಆಲ್ಕೋಹಾಲ್ ಇನ್ ಬೇವರೇಜ್ ಆಧರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹೊಸ ನೀತಿ ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ.
ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ ಬಲ್ಕ್ ಲೀಟರ್ ಆಧರಿತ ತೆರಿಗೆ ವ್ಯವಸ್ಥೆಗೆ ತೆರೆ ಬೀಳಲಿದೆ. ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಬಲ್ಕ್ ಆಧರಿತ ತೆರಿಗೆ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯವಾಗಿದೆ.
ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಆಲ್ಕೋಹಾಲ್ ಇನ್ ಬೇವರೇಜ್ – ವಿವಿಧ ಮದ್ಯದಲ್ಲಿನ ಮದ್ಯದ ಪ್ರಮಾಣ ಆಧರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಈ ಹೊಸ ನೀತಿಯು ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿರುವ ಬಲ್ಕ್ ಲೀಟರ್ ಆಧರಿತ ತೆರಿಗೆ ಪದ್ಧತಿ ವ್ಯವಸ್ಥೆಯು ಮುಗಿಯಲಿದೆ. ಇದೀಗ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪದ್ಧತಿ ಜಾರಿಗೆ ಬರುತ್ತಿದೆ. ಆದರೆ, ಈ ಪದ್ಧತಿಯಿಂದ ಮದ್ಯ ಪ್ರಿಯರಿಗೆ ಇನ್ನಷ್ಟು ಬೆಲೆ ಏರಿಕೆ ಆಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಮದ್ಯದ ಬೆಲೆಯು ದುಬಾರಿಯಾಗಿದೆ.
ಸರ್ಕಾರವು ಏಪ್ರಿಲ್ 18ರಂದು ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಬಂದ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು-2026 ಅನ್ನು ಅಂತಿಮಗೊಳಿಸಲಾಗಿತ್ತು.
ಹೊಸ ನೀತಿಯ ಪ್ರಕಾರ, ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್, ವೈನ್ ಸೇರಿದಂತೆ ವಿವಿಧ ಮದ್ಯಗಳಲ್ಲಿ ಇರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಸ್ಲ್ಯಾಬ್ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್ಗಳಿಗೆ ಸೀಮಿತಗೊಳಿಸಲಾಗಿದೆ.
ಅಬಕಾರಿ ಇಲಾಖೆಯ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುವ ಕಡಿಮೆ ದರದ ಮದ್ಯ ವಿಭಾಗದ ಮೇಲೆ ಈ ನೀತಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ವಿಶೇಷವಾಗಿ ಹೆಚ್ಚು ಮಾರಾಟವಾಗುವ 180 ಮಿಲಿ ಟೆಟ್ರಾ ಪ್ಯಾಕ್ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಹಾಗೂ ವೋಡ್ಕಾ ಬೆಲೆ ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವೇಳೆ ಪ್ರೀಮಿಯಂ ಮದ್ಯ ಬ್ರ್ಯಾಂಡ್ಗಳ ಬೆಲೆ ಶೇ.16 ರಿಂದ ಶೇ.20ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬಹುರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್ಗಳಿಗೆ ಲಾಭವಾಗಬಹುದು. ಆದರೆ, ಸ್ಥಳೀಯ ಡಿಸ್ಟಿಲರಿಗಳು ಮತ್ತು ಪ್ರಾದೇಶಿಕ ಉತ್ಪಾದಕರಿಗೆ ಹಿನ್ನಡೆ ಉಂಟಾಗಬಹುದು ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ. ಕಡಿಮೆ ಬೆಲೆಯ ಭಾರತೀಯ ಮದ್ಯ ಉತ್ಪಾದಕರಿಗೆ ಈ ಹೊಸ ವ್ಯವಸ್ಥೆ ಹೊರೆ ಆಗಬಹುದು. ಸ್ಥಳೀಯ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಅಬಕಾರಿಯಲ್ಲಿ ಇದು ಮಹತ್ವದ ಬೆಳವಣಿಗೆಯಾದರೂ, ಕಳೆದ ಮೂರು ವರ್ಷದ ಅವಧಿಯಲ್ಲಿ ಕನಿಷ್ಠ ಮೂರರಿಂದ ಆರು ಬಾರಿ ವಿವಿಧ ಮಾದರಿಯಲ್ಲಿ ಮದ್ಯದ ಬೆಲೆಯು ಹೆಚ್ಚಳವಾಗಿದೆ. ಈ ರೀತಿ ನಿರಂತರವಾಗಿ ಮದ್ಯ ಬೆಲೆ ಏರಿಕೆ ಆಗುತ್ತಿರುವುದನ್ನು ಮದ್ಯ ಪ್ರಿಯರು ವಿರೋಧಿಸಿದ್ದಾರೆ.
ಈ ಹಿಂದೆ ಬಿಯರ್ ಬೆಲೆ ಹೆಚ್ಚಳವಾದಾಗ ಬಿಯರ್ ಉತ್ಪಾದನಾ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ದೇಶದ ಉಳಿದ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಮದ್ಯದ ಬೆಲೆ ಅದರಲ್ಲೂ ಮುಖ್ಯವಾಗಿ ಬಿಯರ್ ಬೆಲೆ ಹೆಚ್ಚಾಗಿದ್ದು, ಬಿಯರ್ ಬೆಲೆ ಹೆಚ್ಚಾದರೆ ಮಾರಾಟದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿತ್ತು.
ಕರ್ನಾಟಕದಲ್ಲಿ 180 ಮಿಲಿ ಟೆಟ್ರಾ ಪ್ಯಾಕ್ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಮತ್ತು ವೋಡ್ಕಾ ಬೆಲೆಯು ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರೀಮಿಯಂ ಮದ್ಯ ಬ್ರ್ಯಾಂಡ್ಗಳ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರೀಮಿಯಂ ಮದ್ಯ ಬ್ರ್ಯಾಂಡ್ಗಳ ಬೆಲೆಯು ಶೇ.16 ರಿಂದ ಶೇ.20ವರೆಗೆ ಇಳಿಕೆಯಾಗುವ ಸಂಭವ ಇದೆ. ಆದರೆ ಇದರಿಂದ ಸ್ಥಳೀಯ ಮದ್ಯ ಉತ್ಪಾದನಾ ಕಂಪನಿಗಳಿಗೆ ಲಾಭವಾಗುವ ಸಾಧ್ಯತೆ ಕಡಿಮೆ. ಅಲ್ಲದೆ ಇದರಿಂದಲೂ ಮದ್ಯ ಪ್ರಿಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.



