ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿಯಲ್ಲಿ ನೂತನ ಸಭಾಂಗಣ ಕೊಠಡಿ ಉದ್ಘಾಟನೆ ಹಾಗೂ ಕರ ವಸೂಲಾತಿ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಮಾತನಾಡಿ, ನಮ್ಮ ಅವಧಿಯಲ್ಲಿ ನೂತನ ಸಭಾಂಗಣ ಕೊಠಡಿಯನ್ನು ಉದ್ಘಾಟನೆ ಮಾಡಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಪಂಚಾಯ್ತಿ ಅಧಿಕಾರಿಗಳ ಪರಿಶ್ರಮದಿಂದ ನೂತನ ಕಟ್ಟಡ ಉದ್ಘಾಟನೆಗೊಂಡಿದೆ ಎಂದು ಹೇಳಿದರು.

ಅಕ್ರಮ ಸಕ್ರಮ ಸದಸ್ಯ ಕೆಂಡೆಗಣ್ಣೇಗೌಡ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಅಧಿಕಾರಿಗಳ ಪರಿಶ್ರಮದಿಂದ ನೂತನವಾಗಿ ಸಭಾಂಗಣದ ಕೊಠಡಿ ಉದ್ಘಾಟನೆ ಗೊಂಡಿರುವುದು ಬಹಳ ವಿಶೇಷ. ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ಮುಖ್ಯವಾಗಿ ಹಣ ಮುಖ್ಯ. ಅದನ್ನು ಸ್ಥಳೀಯ ಸಂಪನ್ಮೂಲದಿಂದ ಮಾತ್ರ ಪಡೆಯಲು ಸಾಧ್ಯ. ಗ್ರಾಮ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಛತೆ, ವಿದ್ಯುತ್ ಬಳಕೆ, ನೀರು ನಿರ್ವಹಣೆ ಮಾಡುವುದು ನಿರಂತರವಾಗಿದೆ ಅದಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಸಾರ್ವಜನಿಕರ ತೆರಿಗೆಯ ಕಂದಾಯದ ಮೂಲಕ ಬಳಸಿಕೊಳ್ಳಲಾಗುತ್ತದೆ ಹಾಗಾಗಿ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ಒಂದು ಅಥವಾ ಎರಡು ಬಾರಿ ಅವಕಾಶ ತೆಗೆದುಕೊಂಡು ಸಂಪೂರ್ಣವಾಗಿ ಸರ್ಕಾರದ ಕಂದಾಯವನ್ನು ಕಟ್ಟಬೇಕು ಜೊತೆಗೆ ಸಿಬ್ಬಂದಿಗಳ ಜೊತೆ ಅನ್ಯೋನ್ಯತೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಡಾ.ಬಾಬು ಜಗಜೀವರಾಂ ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ ಹದಿನಾಲ್ಕನೇ ಹಣಕಾಸಿನಲ್ಲಿ ಪ್ರತಿ ಸದಸ್ಯರಿಗೆ ಹಣವನ್ನು ಹಂಚಿಕೆ ಮಾಡಿ ಗ್ರಾಮಗಳ ಅಭಿವೃದ್ಧಿ ಮಾಡಿಸಲಾಗುತ್ತದೆ ಹಾಗೆಯೇ ನೂತನ ಸಭಾಂಗಣ ಕೊಠಡಿಯನ್ನು ತಮ್ಮ ಅವಧಿಯಲ್ಲಿ ಮಾಡಿಸಿ ಉದ್ಘಾಟನೆ ನೆರವೇರಿಸಿರುವುದು ಒಳ್ಳೆಯ ಬೆಳವಣಿಗೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಇದ್ದಾಗ ಜನರ ಕಷ್ಟ ಸುಖದಲ್ಲಿ ಪಾಲ್ಗೊಳ್ಳಬೇಕು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನರಿಗೆ ಎಲ್ಲಾ ಸಮಯದಲ್ಲೂ ಸ್ಪಂದಿಸಬೇಕು. ರಾಷ್ಟ್ರಪತಿ ಬಿಟ್ಟರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಚೆಕ್ ಪವರ್ (ಗ್ರೀನ್ ಪೆನ್) ಇರುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವಸಂತ ನಾಗರಾಜ್ , ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಚ್ ಡಿ ಕೋಟೆ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಉಪಾಧ್ಯಕ್ಷರು ಆದ ಸಣ್ಣಸ್ವಾಮಿ ನಾಯಕ, ಮಲ್ಲೇಶ್, ಮಹೇಶ್, ರಮೇಶ್, ಚೆಲುವರಾಜು, ಭಾಗ್ಯ, ಲಕ್ಷ್ಮಮ್ಮ, ಮಾಲತಿ, ಮಹದೇವಮ್ಮ, ಭಾಗ್ಯಮ್ಮ, ಸಿಂಧು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಕಾರ್ಯದರ್ಶಿ ಚೆಲುವರಾಜು, ನರಸಿಂಹ, ಮೂರ್ತಿ, ಸುರೇಶ್, ಹನುಮಂತರಾಜು, ಕೃಷ್ಣಮೂರ್ತಿ, ಜ್ಯೋತಿ, ಅಭಿ, ಎಲ್ಲಭೋವಿ, ನಾಗಮ್ಮ, ಕೃಷ್ಣಮೂರ್ತಿ, ಮನೋಜ್ ಕುಮಾರ್, ಕೆಂಡಪ್ಪ, ಗುತ್ತಿಗೆದಾರ ಶಿವರಾಜ್, ರವಿ ಸಿ. ಕೆ, ಪೊಲೀಸ್ ನಾಗರಾಜು, ರೇಖಾ, ದಾಸೇಗೌಡ, ನಾಗೇಂದ್ರ, ಕೃಷ್ಣ, ರವಿ, ಶ್ರೀನಿವಾಸ್ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಮುಖಂಡರು, ಸಾರ್ವಜನಿಕರು ಹಾಜರಿದ್ದರು.



