Thursday, April 17, 2025
Google search engine

Homeರಾಜ್ಯಭೂ ಕುಸಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿ: ಸಚಿವ ಕೃಷ್ಣಭೈರೇಗೌಡ

ಭೂ ಕುಸಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಉಂಟಾದಂತ ಭೂ ಕುಸಿತದ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕರ್ನಾಟಕದಲ್ಲಿ ಭೂ ಕುರಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತದ ಪರಿಣಾಮಗಳನ್ನು ತಗ್ಗಿಸುವ ಸಂಬಂಧ ಅಭಿವೃದ್ಧಿ ಕೇಂದ್ರಿತ ಚಟುವಟಿಕೆ ನಿಯಂತ್ರಿಸುವ ನೀತಿಯೊಂದನ್ನು ರೂಪಿಸಲಾಗುತ್ತಿದೆ, ಗುಡ್ಡಗಳನ್ನು ಕಡಿದು ನಿರ್ಮಾಣ ಚಟುವಟಿಕೆ ಕೈಗೊಳ್ಳುವುದು ಸೇರಿ ಹಲವು ಅವೈಜ್ಞಾನಿಕ ಅಭಿವೃದ್ಧಿಗೆ ನಿರ್ಬಂಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಗುಡ್ಡಗಳನ್ನು ೯೦ ಡಿಗ್ರಿಯಲ್ಲಿ ಲಂಬವಾಗಿ ಕತ್ತರಿಸುವುದನ್ನು ತಡೆಯುವುದು, ಗುಡ್ಡದಿಂದ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವುದು ಸೇರಿ ನಿರ್ಮಾಣ ಪರವಾನಗಿಯಲ್ಲಿ ಷರತ್ತು ವಿಧಿಸುವುದು, ಅನಧಿಕೃತ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವುದು ಒಳಗೊಂಡಂತೆ ಹಲವು ಉಪಕ್ರಮಗಳು ನೀತಿಯಲ್ಲಿ ಇರಲಿವೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular