ನವದೆಹಲಿ : ಇಂದಿನಿಂದ ಗ್ಯಾಸ್ ಬುಕ್ಕಿಂಗ್‌ಗೆ ಹೊಸ ನಿಯಮ ಜಾರಿಯಾಗಿದೆ. ಗಡುವು ಮುಗಿಯುವ ಮೊದಲೇ ಗ್ಯಾಸ್ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಜೋರಾಗಿದೆ. ಹೀಗಾಗಿ ಗ್ಯಾಸ್ ಕಂಪನಿಗಳು ಬುಕ್ಕಿಂಗ್ ಹೊಸ ನಿಯಮ ಜಾರಿಗೊಳಿಸಿದೆ. ಸಿಂಗಲ್ ಗ್ಯಾಸ್ ಕನೆಕ್ಷನ್ ಹಾಗೂ ಡಬಲ್ ಕನೆಕ್ಷನ್‌ಗೆ ಬೇರೆ ಬೇರೆ ನಿಯಮಗಳನ್ನು ಜಾರಿತಂದಿದೆ.
ಸಿಂಗಲ್ ಕನೆಕ್ಷನ್ ನಿಯಮ: ಗ್ಯಾಸ್ ಡೆಲವರಿ ಆದ ದಿನದಿಂದ 25 ದಿನದ ನಂತರ ಗ್ಯಾಸ್ ಬುಕ್ ಮಾಡಬೇಕು. ಈ ಮೊದಲು 21 ದಿನವಿತ್ತು. ಇದೀಗ ಅದನ್ನು 25 ದಿನಕ್ಕೆ ಏರಿಸಿದ್ದಾರೆ.
ಡಬಲ್ ಕನೆಕ್ಷನ್ ನಿಯಮ: ಗ್ಯಾಸ್ ಡೆಲವರಿ ಆದ ದಿನದಿಂದ 35 ದಿನದ ನಂತರ ಗ್ಯಾಸ್ ಬುಕ್ ಮಾಡಬೇಕು.
5 ಕೆಜಿ ಸಿಲಿಂಡರ್: ಗ್ಯಾಸ್ ಡೆಲವರಿ ಆದ ದಿನದಿಂದ 16ಕ್ಕೆ ದಿನಕ್ಕೆ ಬುಕ್ ಮಾಡಬೇಕು. ಈ ಮೊದಲು 9 ದಿನವಿತ್ತು. ಇದೀಗ ಅದನ್ನು 16 ದಿನಕ್ಕೆ ಏರಿಸಿದ್ದಾರೆ.
10 ಕೆಜಿ ಸಿಲಿಂಡರ್: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೊದಲು 18 ದಿನಕ್ಕೆ ಬುಕ್ ಮಾಡಬಹುದಿತ್ತು. ಇದೀಗ ಗ್ಯಾಸ್ ಡೆಲಿವರಿ ಆದ 32ನೇ ದಿನಕ್ಕೆ ಬುಕ್ ಮಾಡಬೇಕು.
ಒಂದು ವೇಳೆ ಗಡುವು ಮುಗಿಯೋದಕ್ಕೂ ಮೊದಲು ಗ್ಯಾಸ್ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್ ಆಗಲಿದೆ. ಹೀಗಾಗಿ ಡೆಲಿವರಿ ಆದ ದಿನದಿಂದ ಗಡುವು ನೀಡಿದ ದಿನ ಮುಕ್ತಾಯದ ನಂತರವೇ ಗ್ಯಾಸ್ ಬುಕ್ ಮಾಡಬೇಕು.
ಇನ್ನೂ ಇಂದಿನಿಂದ ಕೆಲವು ಆ್ಯಪ್‌ಗಳಲ್ಲಿ ಗ್ಯಾಸ್ ಬುಕ್ ಆಗಲ್ಲ. ಒಂದು ವೇಳೆ ಆ್ಯಪ್‌ಗಳಲ್ಲಿ ಬುಕ್ ಮಾಡಿದ್ರೆ ದುಡ್ಡು ಕಡಿತವಾಗುತ್ತೆ, ಆದರೆ ಗ್ಯಾಸ್ ಬುಕ್ ಆಗಲ್ಲ. ಫೋನ್ ಪೇ, ಗೂಗಲ್ ಪೇ, ಅಮೇಜಾನ್ ಪೇ, ಇಂಡಿಯನ್ ಆಯಿಲ್ ಒನ್ ಆಪ್, ಹೆಚ್‌ಪಿ ಪೇ, ಹಲೋ ಬಿಪಿಸಿಎಲ್ ಈ ಯಾವುದೇ ಆ್ಯಪ್‌ಗಳಲ್ಲಿ ಬುಕ್ ಆಗಲ್ಲ. ಇದರ ಬದಲಾಗಿ ಐವಿಆರ್‌ಎಸ್, ಮಿಸಡ್‌ಕಾಲ್, ವಾಟ್ಸಪ್ ಬುಕ್ಕಿಂಗ್ ಈ ಮೂರು ಮಾದರಿಯಲ್ಲಿ ಮಾತ್ರ ಗ್ಯಾಸ್ ಬುಕ್ ಆಗುತ್ತದೆ.
ಉಜ್ವಲ ಗ್ಯಾಸ್ ಬುಕ್ಕಿಂಗ್: ಗ್ಯಾಸ್ ಡೆಲಿವರಿ ಆದ 45 ದಿನದ ನಂತರವೇ ಗ್ಯಾಸ್ ಬುಕ್ ಮಾಡಬೇಕು. ಈ ಮೊದಲು 35 ದಿನ ಬುಕ್ಕಿಂಗ್ ನಿಯಮ ಇತ್ತು. ಈಗ 45 ದಿನಕ್ಕೆ ಏರಿಸಿದ್ದಾರೆ.



