ಹೊಸೂರು : ಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಪ್ರೌಡಶಾಲೆಯ ನೂತನ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಡಿ. ದೀಪು ಆಯ್ಕೆಯಾಗಿದ್ದಾರೆ.
ಶುಕ್ರವಾರ ಶಾಲೆಯ ಮುಖ್ಯಶಿಕ್ಷಕ ಸಿದ್ದಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಎಸ್.ಡಿ.ಎಂ.ಸಿ ರಚನೆಯ ಸಭೆಯಲ್ಲಿ ದೀಪು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಳಿದಂತೆ ಎಸ್.ಡಿ.ಎಂ.ಸಿ.ಸದಸ್ಯರಾಗಿ ಮಹದೇವ,ಪವಿತ್ರ,ಆರಿಪಭಾನು,ರಶ್ಮಿ,ಎಚ್.ಕೆ.ಹರೀಶ್,ಪ್ರವೀಣ್ ಕುಮಾರ್, ಶ್ಯಾಮ್, ಗೋಪಾಲ್ ಆಯ್ಕೆಯಾದರು. ನಂತರ ಮಾತನಾಡಿದ ದೀಪು ತಮ್ಮ ಅವದಿಯಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ದಿ ಶಾಸಕ ಡಿ.ರವಿಶಂಕರ್ ಮಾರ್ಗದರ್ಶನದಲ್ಲಿ ಶ್ರಮಿಸಲಿದ್ದು ಇದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು
ನಂತರ ನೂತನ ಎಸ್.ಡಿ.ಎಂ.ಸಿ.ಅಧ್ಯಕ್ಷ ದೀಪು ಅವರನ್ನು ಹೊಸೂರು ಕಾಲೇಜು ಉಪಾಧ್ಯಕ್ಷ ಎಚ್.ಎಸ್.ಶ್ರೀನಿವಾಸ್, ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಡೈರಿ ಮಾಜಿ ಅಧ್ಯಕ್ಷ ಎಚ್.ಎಸ್.ರವಿ.ಮುಖಂಡರಾದ ಆನಂತ್,ವಕೀಲ ಪಣಿ,ಮೆಕ್ಯಾನಿಕ್ ಮುನ್ನಾ,ಮೀನ್ ಮಧು, ರಂಗಸ್ವಾಮಿ, ಟೈಲರ್ ರಫಿ,ಐಪಿ ವೆಂಕಟೇಶ್,ಹರೀಶ್, ಅರಬ್ ಜಾನ್, ಅಭಿ ಸೇರಿದಂತೆ ಮತ್ತಿತರರು ಹಾಜರಿದ್ದರು.