Thursday, April 17, 2025
Google search engine

Homeರಾಜ್ಯಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಆ್ಯಪ್‌ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ: ಪ್ರಿಯಾಂಕ್ ಖರ್ಗೆ

ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಆ್ಯಪ್‌ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹರಡಿಕೊಳ್ಳುತ್ತಿದೆ. ಹೀಗಾಗಿ ಈ ಆ್ಯಪ್‌ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಹೊಸ ಕಾನೂನು ತರುವ ಬಗ್ಗೆ ಚರ್ಚೆ ನಡೆದಿದೆ. ಇವುಗಳಿಂದ ದುರಾಸೆಗೆ ಬೀಳದಂತೆ ನಮ್ಮ ಜನರನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದ್ದೇವೆ ಎಂದಿದ್ದಾರೆ. ಈಗಾಗಲೇ ಕಾಯ್ದೆಗಳು ಇವೆ. ಆದರೆ ಕಾಯ್ದೆಗಳನ್ನ ಸಮರ್ಪಕವಾಗಿ ಜಾರಿಗೆ ತರಬೇಕು ಮತ್ತು ಹೆಚ್ಚುವರಿ ಕಾಯ್ದೆಗಳನ್ನ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ.

ಗೇಮಿಂಗ್ ಇಂಡಸ್ಟ್ರಿ ಮತ್ತು ಸಾರ್ವಜನಿಕರು, ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಿಂದ ಸಲಹೆ ಪಡೆದು ಒಂದು ಡ್ರಾಫ್ಟ್ ರೆಡಿ ಮಾಡಲು ಗೃಹ ಸಚಿವರು ಆದೇಶ ಕೊಡಲಾಗಿದೆ ಎಂದು ಹೇಳಿದರು. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ಗಳಿಗೆ ಶೀಘ್ರದಲ್ಲೇ ಕೆಲ ಮಾನದಂಡಗಳನ್ನು ತರಲಾಗುತ್ತದೆ. ಗೇಮಿಂಗ್ ಆ್ಯಪ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಕಷ್ಟದ ಕೆಲಸ. ಕೇವಲ ನಮ್ಮ ದೇಶ ಅಷ್ಟೇ ಅಲ್ಲ, ಬೇರೆ ದೇಶದ ಗೇಮಿಂಗ್ ಆ್ಯಪ್‌ಗಳು ಇವೆ. ಕಾನೂನು ಬಾಹಿರವಾಗಿರುವುದನ್ನು ಮೊದಲು ನಿಷೇಧ ಮಾಡಬೇಕು. ಲೀಗಲ್ ಆಗಿ ಇದ್ದರೆ ನಿಯಂತ್ರಣ ಹೇಗೆ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.

RELATED ARTICLES
- Advertisment -
Google search engine

Most Popular