ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗ್ರಾಮೀಣ ಪ್ರದೇಶವಾದ ಲಕ್ಷ್ಮಿಪುರ ಗ್ರಾಮಕ್ಕೆ ಹೊಸದಾಗಿ ಸಾರಿಗೆ ಸಂಪರ್ಕವನ್ನು ಕಲ್ಪಿಸಿರುವುದು ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಾ.ಪಂ.ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ ಹೇಳಿದರು.
ಅವರು ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮಕ್ಕೆ ಪಿರಿಯಾಪಟ್ಟಣ ಕೆಎಸ್‌ಆರ್‌ಟಿಸಿ ಸಾರಿಗೆ ಘಟಕದಿಂದ ನೂತನವಾಗಿ ಆರಂಭಗೊoಡು ಗ್ರಾಮಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಸಾಲಿಗ್ರಾಮದಿಂದ ಚಿಕ್ಕನಾಯಕನಹಳ್ಳಿ,ಲಕ್ಷ್ಮಿಪುರ, ಚುಂಚನಕಟ್ಟೆ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಬೆಳಿಗ್ಗೆ ತೆರಳಲು ಮತ್ತು ರಾತ್ರಿ ಪಿರಿಯಾ ಪಟ್ಟಣದಿಂದ ಚುಂಚನಕಟ್ಟೆ, ಲಕ್ಷ್ಮಿಪುರ ಮಾರ್ಗವಾಗಿ ಸಾಲಿಗ್ರಾಮಕ್ಕೆ ಬರಲು ಬಸ್ಸಿನ ವ್ಯವಸ್ಥೆ ಇರಲಿಲ್ಲ ಇದರ ಬಗ್ಗೆ ಶಾಸಕ ಡಿ.ರವಿಶಂಕರ್ ಅವರಿಗೆ ಗ್ರಾಮದ
ವತಿಯಿಂದ ಮನವಿ ಮಾಡಲಾಗಿತ್ತು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಈ ಮಾರ್ಗದಲ್ಲಿ ಬಸ್ಸಿನ ಸಂಚಾರ ಆರಂಭಗೊoಡಿದೆ. ಇದಕ್ಕೆ ಸಹಕರಿಸಿದ ಶಾಸಕ ಡಿ.ರವಿಶಂಕರ್, ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ವಿಭಾಗೀಯ ಸಂಚಾರಿ ಅಧಿಕಾರಿ ದಿನೇಶ್ ಕುಮಾರ್, ಪಿರಿಯಾಪಟ್ಟಣ ಕೆಎಸ್‌ಆರ್‌ಟಿಸಿ ಸಾರಿಗೆ ಘಟಕದ ವ್ಯವಸ್ಥಾಪಕ ರಾಮಚಂದದರ್ಶನ್, ಸಂಚಾರಿ ಮೇಲ್ವಿಚಾರಕ ಪ್ರಕಾಶ್ ಅವರುಗಳಿಗೆ ಗ್ರಾಮಸ್ಥರುಗಳ ಪರವಾಗಿ ಅಭಿನಂದನೆ ಸಲ್ಲಿಸುತೇವೆ ಎಂದರು.
ಸಂದರ್ಭದಲ್ಲಿ ಸಯ್ಯದ್ ಅಹಮದ್, ಗ್ರಾ.ಪಂ.ಸದಸ್ಯ ಎಲ್.ಟಿ.ನಾಗೇಂದ್ರ, ವಿಎಸ್‌ಎಸ್‌ಬಿಎನ್ ಉಪಾಧ್ಯಕ್ಷ ದೇವರಾಜು, ಮುಖಂಡರುಗಳಾದ ಲೋಕೇಶ್, ಮೂರ್ತಿ, ಪೂ.ರವಿ, ದೀಪು, ಕುಳ್ಳಶೆಟ್ಟಿ, ಕೃಷ್ಣ, ಮೋಹನಶೆಟ್ಟಿ, ಜಗದೀಶ್, ತಮ್ಮಯ್ಯ, ಕುಮಾರ, ಪುನೀತ್, ಚಿನ್ನುಸಾಹೇಬ್, ಜಡಗನಕುಮಾರ, ಮೋಹನ, ಕುಮಾರ ಸೇರಿದಂತೆ ಹಲವರು ಇದ್ದರು.