Wednesday, April 9, 2025
Google search engine

Homeಅಪರಾಧನವದಂಪತಿ ಹೊಡೆದಾಟ: ವಧು ಸಾವು, ಚಿಕಿತ್ಸೆ ಫಲಿಸದೇ ವರನೂ ಸಾವು

ನವದಂಪತಿ ಹೊಡೆದಾಟ: ವಧು ಸಾವು, ಚಿಕಿತ್ಸೆ ಫಲಿಸದೇ ವರನೂ ಸಾವು

ಕೋಲಾರ : ಕೋಲಾರದಲ್ಲಿ ಮದುವೆಯಾಗಿ ಫಸ್ಟ್ ನೈಟ್ ಗೂ ಮುನ್ನವೇ ಹೊಡೆದಾಡಿಕೊಂಡಿದ್ದ ನವಜೋಡಿ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ವರ ನವೀನ್ ಕೂಡ ಚಿಕಿತ್ಸೆ ಫಲಿಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ನವಜೋಡಿ ಫಸ್ಟ್ ನೈಟ್ ಗೂ ಮುಂಚೆನೆ ಮಚ್ಚಿನಿಂದ ಹೊಡೆದಾಡಿಕೊಂಡು ನಿನ್ನೆ ನವವಧು ಸಾವನ್ನಪ್ಪಿ, ವರ ಕೂಡ ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವಧು ಲಿಖಿತ ಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ಕೆಲ ಗಂಟೆಗಳ ನಂತರ ವಧು, ವರರು ಮನೆಯ ಕೊಠಡಿಗೆ ಹೋಗಿದ್ದಾರೆ. ಕೊಠಡಿ ಹೋದ ಕೆಲ ಹೊತ್ತಿಗೆ ನವೀನ್ ಹಾಗೂ ಲಿಖಿತ ಹೊಡೆದಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಖಿತ ಸಾವನ್ನಪ್ಪಿದ್ರೆ, ನವೀನ್ ಕೂಡ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

RELATED ARTICLES
- Advertisment -
Google search engine

Most Popular