ನವವಿವಾಹಿತೆಯನ್ನು ಆಕೆಯ ಪತಿಯೊಂದಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಎಂಟು ಮಂದಿಗೆ ಮಧ್ಯಪ್ರದೇಶದ ರೇವಾ ನ್ಯಾಯಾಲಯವು ಜೀವ ಇರುವವರೆಗೂ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶಿಸಿದೆ.
2024 ಅಕ್ಟೋಬರ್‌ನಲ್ಲಿ ಈ ಅತ್ಯಾಚಾರ ಘಟನೆ ನಡೆದಿದ್ದು, ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ದಾಖಲೆಯಲ್ಲಿರುವ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಎಂಟು ಜನ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶೆ ಪದ್ಮಾ ಜಾತವ್ ಎಂಟು ಆರೋಪಿಗಳಾದ ರಾಮಕಿಶನ್, ಗರುಡ್ ಕೋರಿ, ರಾಕೇಶ್ ಗುಪ್ತಾ, ಸುಶೀಲ್ ಕೋರಿ, ರಜನೀಶ್ ಕೋರಿ, ದೀಪಕ್ ಕೋರಿ, ರಾಜೇಂದ್ರ ಕೋರಿ ಮತ್ತು ಲವ್‌ಕುಶ್ ಕೋರಿ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ, ಪ್ರತಿಯೊಬ್ಬ ಅಪರಾಧಿಗೂ ತಲಾ ₹2,30,000 ದಂಡ ವಿಧಿಸಿದೆ.
ನವವಿವಾಹಿತ ದಂಪತಿಯನ್ನು ಅಪಹರಿಸಿದ್ದ ಅಪರಾಧಿಗಳ ಪೈಕಿ ಆರು ಮಂದಿ ಪತಿಯ ಮುಂದೆಯೇ ಅತ್ಯಾಚಾರ ಎಸಗಿದ್ದರು. ಮದ್ಯ ಸೇವಿಸಿದ್ದ ಅಪರಾಧಿಗಳು ಸರದಿಯಂತೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದರು. ಗುದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ 2024ರ ಅಕ್ಟೋಬರ್ 21ರಂದು ಪ್ರಕರಣ ದಾಖಲಾಗಿತ್ತು.