Wednesday, April 30, 2025
Google search engine

Homeರಾಜ್ಯಸುದ್ದಿಜಾಲತದಿಗೆ ಅಮವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ 3 ದಿನದಲ್ಲಿ ₹1.52 ಕೋಟಿ ಆದಾಯ

ತದಿಗೆ ಅಮವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ 3 ದಿನದಲ್ಲಿ ₹1.52 ಕೋಟಿ ಆದಾಯ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತದಿಗೆ ಅಮವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕಾಗಿ ಆಗಮಿಸಿದ್ದಾರೆ.

ಮೂರೇ ದಿನಗಳಲ್ಲಿ ಶ್ರೀ ಕ್ಷೇತ್ರದಿಂದ ₹1.52 ಕೋಟಿ ಆದಾಯ ಸಂಗ್ರಹವಾಗಿದೆ. ಈ ವೇಳೆ 1,192 ಚಿನ್ನದ ರಥೋತ್ಸವ, 70 ಬೆಳ್ಳಿ ರಥೋತ್ಸವ, 2,767 ಹುಲಿವಾಹನ, 241 ರುದ್ರಾಕ್ಷಿ ಮಂಟಪ, 776 ಬಸವ ವಾಹನ ಉತ್ಸವಗಳು ನಡೆದಿವೆ. ಈ ಎಲ್ಲ ಸೇವೆಗಳಿಂದ ₹48.58 ಲಕ್ಷ, ಮಿಶ್ರ ಪ್ರಸಾದದಿಂದ ₹11.31 ಲಕ್ಷ, ಲಡ್ಡು ಪ್ರಸಾದದಿಂದ ₹37.51 ಲಕ್ಷ ಸೇರಿದಂತೆ, ಮಾಹಿತಿ ಕೇಂದ್ರ, ವಿವಿಧ ಸೇವೆಗಳಿಂದ ಸೇರಿ ₹1,52,75,344 ರೂ. ಆದಾಯ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular