ಫುಟ್ಬಾಲ್ ತಾರೆ ನೇಮರ್ , ಬ್ರೆಜಿಲ್ ತಂಡಕ್ಕೆ ಮರಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಅಮೆರಿಕದ ವಿಶ್ವಕಪ್‌ನ ಆರಂಭಿಕ ಎರಡು ಸುತ್ತಿನ ಅರ್ಹತಾ ಪಂದ್ಯಗಳಿಗೆ ಬ್ರೆಜಿಲ್‌ನ ಹೊಸ ತರಬೇತುದಾರ ಫರ್ನಾಂಡೋ ಡಿನಿಜ್ ನೇಮರ್ ತಂಡಕ್ಕೆ ಮರಳುವಂತೆ ಸೂಚಿಸಿದ್ದರು. ಸ್ಟ್ರೈಕರ್ ನೇಮರ್ ಕಳೆದ ವಿಶ್ವಕಪ್ ನಂತರ ಮೊದಲ ಬಾರಿಗೆ ಬ್ರೆಜಿಲ್ ತಂಡಕ್ಕೆ ಮರಳಿದ್ದಾರೆ.
ಬ್ರೆಜಿಲ್ ಸೆಪ್ಟೆಂಬರ್ ೮ ರಂದು ಅಮೆಜಾನ್ ಪ್ರದೇಶದ ಬೆಲೆಮ್‌ನಲ್ಲಿ ಬೊಲಿವಿಯಾ ತಂಡವನ್ನು ಎದುರಿಸಲಿದೆ. ಇದಾದ ನಂತರ ನಾಲ್ಕು ದಿನಗಳ ನಂತರ ಲಿಮಾದಲ್ಲಿ ಪೆರುವನ್ನು ಎದುರಿಸಲಿದೆ. ನೇಮರ್ ಸೌದಿ ಅರೇಬಿಯಾದ ಅಲ್-ಹಿಲಾಲ್ ಪರ ಆಡಲು ಇತ್ತೀಚೆಗಷ್ಟೇ ಪ್ಯಾರಿಸ್ ಸೇಂಟ್-ಜರ್ಮೈನ್ ತೊರೆದರು.
ನೇಮರ್ ಜೊತೆ ಮಾತುಕತೆ ನಡೆಸಲಾಗಿತ್ತು ಎಂದು ನೂತನ ಕೋಚ್ ಡಿನಿಜ್ ಅವರು ಹೇಳಿದ್ದಾರೆ. ನೇಮರ್ ಈ ವರ್ಷದ ಆರಂಭದಲ್ಲಿ ಬ್ರೆಜಿಲ್ ಫ್ರೆಂಡ್ಲಿ ಪಂದ್ಯಗಳಲ್ಲಿ ಆಡಿಲ್ಲ. ಅಲ್-ಹಿಲಾಲ್ ಕ್ಲಬ್ ೧೦೦ ಮಿಲಿಯನ್ ಯುರೋ (ಸುಮಾರು ೧೪೫೫ಕೋಟಿ ರೂಪಾಯಿ) ಮೊತ್ತ ನೀಡಿ ಬುಟ್ಟಿಗೆ ಹಾಕಿಕೊಂಡಿದೆ. ಎರಡು ವರ್ಷಗಳ ಕಾಲ ನೇಮರ್ ಈ ಸೌದಿ ಕ್ಲಬ್ ಅಲ್ ಹಿಲಾಲ್ ಪರ ಆಡಲಿದ್ದಾರೆ.
ಗೋಲ್‌ಕೀಪರ್‌ಗಳು: ಅಲಿಸನ್ (ಲಿವರ್‌ಪೂಲ್), ಎಡರ್ಸನ್ (ಮ್ಯಾಂಚೆಸ್ಟರ್ ಸಿಟಿ), ಬೆಂಟೊ (ಅಥ್ಲೆಟಿಕೊ ಪ್ಯಾರಾನೆನ್ಸ್).
ಡಿಫೆಂಡರ್ಸ್: ಡ್ಯಾನಿಲೋ (ಜುವೆಂಟಸ್), ರೆನಾನ್ ಲೋಡಿ (ಮಾರ್ಸಿಲ್ಲೆ), ರೋಜರ್ ಇಬಾನೆಜ್ (ಅಲ್-ಅಹ್ಲಿ), ಗೇಬ್ರಿಯಲ್ ಮ್ಯಾಗಲ್ಹೇಸ್ (ಆರ್ಸೆನಲ್), ಮಾರ್ಕ್ವಿನೋಸ್ (ಪ್ಯಾರಿಸ್ ಸೇಂಟ್-ಜರ್ಮೈನ್), ನಿನೋ (ಫ್ಲುಮಿನೆನ್ಸ್), ವಾಂಡರ್ಸನ್ (ಮೊನಾಕೊ), ಕೈಯೊ ಹೆನ್ರಿಕ್ (ಮೊನಾಕೊ) . ಮಿಡ್‌ಫೀಲ್ಡರ್‌ಗಳು: ಆಂಡ್ರೆ (ಫ್ಲುಮಿನೆನ್ಸ್), ಬ್ರೂನೋ ಗೈಮಾರೆಸ್ (ನ್ಯೂಕ್ಯಾಸಲ್), ಕ್ಯಾಸೆಮಿರೊ (ಮ್ಯಾಂಚೆಸ್ಟರ್ ಯುನೈಟೆಡ್), ಜೋಲಿಂಟನ್ (ನ್ಯೂಕ್ಯಾಸಲ್), ರಾಫೆಲ್ ವೀಗಾ (ಪಾಲ್ಮೀರಾಸ್). ಫಾರ್ವರ್ಡ್‌ಗಳು: ಆಂಟನಿ (ಮ್ಯಾಂಚೆಸ್ಟರ್ ಯುನೈಟೆಡ್), ಗೇಬ್ರಿಯಲ್ ಮಾರ್ಟಿನೆಲ್ಲಿ (ಆರ್ಸೆನಲ್), ಮ್ಯಾಥ್ಯೂಸ್ ಕುನ್ಹಾ (ವಾಲ್ವರ್‌ಹ್ಯಾಂಪ್ಟನ್), ನೇಮರ್ (ಅಲ್-ಹಿಲಾಲ್), ರಿಚಾರ್ಲಿಸನ್ (ಟೊಟೆನ್‌ಹ್ಯಾಮ್), ರೊಡ್ರಿಗೊ (ರಿಯಲ್ ಮ್ಯಾಡ್ರಿಡ್), ವಿನಿಶಿಯಸ್ ಜೂನಿಯರ್ (ರಿಯಲ್ ಮ್ಯಾಡ್ರಿಡ್).