ಎಡತೊರೆ ಮಹೇಶ್
ಎಚ್.ಡಿ.ಕೋಟೆ: ತಾಲ್ಲೂಕು ಶಾಂತಿಪುರ ಗ್ರಾಮದಲ್ಲಿ ವಾಸಿಸುತ್ತಿರುವ ಸವಿತಾ ಬಿ ಮತ್ತು ನಾಗರಾಜ ಕೆ ಇವರ ಹಿರಿಯ ಪುತ್ರ ನಿಖಿಲ್ ಶ್ರೀನಿವಾಸ್ ಕಂಜಂಪಾಡಿ ಭಾರತೀಯ ಭೂಸೇನೆಯ ಅಧಿಕಾರಿ ಹುದ್ದೆಯ ತರಬೇತಿಗೆ ಆಯ್ಕೆಯಾಗಿದ್ದಾರೆ.
ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ 2 ವರ್ಷಗಳ ಕಠಿಣ ತರಬೇತಿ ಪಡೆದು ಭಾರತೀಯ ಭೂಸೇನೆಯ ಆಯ್ಕೆ ಪ್ರಕ್ರಿಯೆಯ 15ನೇ ತಂಡದಲ್ಲಿ ದಿನಾಂಕ ಡಿ.9 ರಂದು ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿರುತ್ತಾರೆ.
ಸಣ್ಣ ವಯಸ್ಸಿನಿಂದಲೂ ದೇಶಭಕ್ತಿಗೆ ಮೊದಲನೇ ಆದ್ಯತೆ. ಪದವಿಗಾಗಿ ಯುವರಾಜ ಕಾಲೇಜು ಸೇರಿದ ನಂತರ ಅಲ್ಲಿ ಎನ್.ಸಿ.ಸಿ ಗೆ ಸೇರಿದುದು ಭಾರತೀಯ ಸೈನ್ಯಕ್ಕೆ ಸೇರಲು ಒಂದು ಅಡಿಪಾಯ ಹಾಕಿದಂತಾಯಿತು. ಎನ್.ಸಿ.ಸಿ. ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಭಾಗವಹಿಸಿರುತ್ತಾನೆ.
ಪದವಿ ಪಡೆದ ತಕ್ಷಣ ಸೈನ್ಯಕ್ಕೆ ಸೇರ್ಪಡೆಯಾಗಲು ಅವಶ್ಯಕತೆ ಇರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರಾರಂಭ. ಸುಮಾರು 5 ಪ್ರಯತ್ನಗಳ ನಂತರ 6ನೇ ಪ್ರಯತ್ನದಲ್ಲಿ ಭಾರತೀಯ ಭೂಸೇನೆಯ ಅಧಿಕಾರಿ ಹುದ್ದೆಯ ತರಬೇತಿಗೆ ಆಯ್ಕೆ. ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ನಲ್ಲಿ 2 ವರ್ಷಗಳ ಕಠಿಣ ತರಬೇತಿ ಪಡೆದು ಭಾರತೀಯ ಭೂಸೇನೆ ಗೆ ಆಯ್ಕೆ ಆಗುತ್ತಿದ್ದಂತೆ ಕುಟುಂಬ ವರ್ಗದವರು ಮತ್ತು ತಾಲೂಕಿನ ಜನತೆ ಸಿಹಿ ಹಂಚಿ ಸಂಭ್ರಮಿಸಿದರು.