ಮೈಸೂರು : ಗೂಡ್ಸ್ ಆಟೋ ಮೂಲಕ ಕಳವು ಮಾಲು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ೩ ಲಕ್ಷ ರೂ ಮೌಲ್ಯದ ಮೋಟಾರ್ ಇಂಜಿನ್ ಸೇರಿದಂತೆ ೨ ಗೂಡ್ಸ್ ವಾಹನವನ್ನು ಕೆಆರ್‌ಎಸ್ ರಸ್ತೆಯ ಕುಸುಮಾ ಚಂದ್ರಶೇಖರ್ ಕಲ್ಯಾಣ ಮಂಟಪದ ಸಮೀಪದಲ್ಲಿ ವಶಕ್ಕೆ ಪಡೆದಿದ್ದಾರೆ.
ನ.೩೦ ರಂದು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡೀಕೇಮ್ ರೆಸಿನ್ಸ್ ಲಿ, ಸ್ಟೋರ್‌ನ ರೋಲಿಂಗ್ ಶೆಲ್ಟರ್ ಮೀಟಿ ಫ್ಯಾಕ್ಟರಿಯಲ್ಲಿ ೩ ಲಕ್ಷ ರೂ. ಮೌಲ್ಯದ ಮೋಟಾರ್, ಕಬ್ಬಿಣದ ಪದಾರ್ಥಗಳನ್ನು ಕಳುವು ಮಾಡಲಾಗಿತ್ತು. ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸುರೇಶ್‌ಕುಮಾರ್ ಎಸ್.ಡಿ, ಪಿ.ಎಸ್.ಐ ನಾರಾಯಣ್ ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.