ಹೊಸೂರು : ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಗ್ರೂಪ್ಸ್ ಅವರಿಂದ ಗುತ್ತಿಗೆ ನೊಂದಣಿ ಮಾಡಿಸುವಂತೆ ರಾಜ್ಯ ಸರ್ಕಾರವನ್ನು ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಮಾತನಾಡಿದ ಅವರು ಈ ಹಿಂದೆ ಈ ಕಾರ್ಖಾನೆಯನ್ನು ಗುತ್ತಿಗೆ ಪಡೆದಿದ್ದ ಅಂಬಿಕಾ ಶುಗರ್ಸ್ ನವರು ನೊಂದಣಿ ಮಾಡಿಸದೇ ಬಿಟ್ಟು ಹೋಗಿದ್ದನ್ನು ಸದನದ ಗಮನಕ್ಕೆ ತಂದರು.
ನಿರಾಣಿ ಗ್ರೂಪ್ಸ್ ನವರು ಈ ಸಾಲಿನಲ್ಲಿ 23 ಸಾವಿರ ಟನ್ ಕಬ್ಬು ಅರೆದಿದ್ದು ಇವರು ಗುತ್ತಿಗೆ ನೋಂದಣಿ ಮಾಡದೇ ಇರುವುದರಿಂದ ರೈತರ ಮತ್ತು ಕಾರ್ಮಿಕರಿಗೆ ಆತಂಕ ಇದೆ ಎಂದು ಸದನಕ್ಕೆ ತಿಳಿಸಿದರು.
ಸರ್ಕಾರ ಈ ಬಗ್ಗೆ ಗಮನ ಹರಿಸಿ ಇನ್ನು ಮೂರು ತಿಂಗಳ ಒಳಗಾಗಿ ನಿರಾಣಿ ಗ್ರೂಪ್ ನವರಿಗೆ ಗುತ್ತಿಗೆ ನೊಂದಣಿ ಮಾಡಿಸಲು ಸೂಕ್ತ ನಿರ್ದೇಶನ ನೀಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.