Friday, April 18, 2025
Google search engine

Homeರಾಜ್ಯಸುದ್ದಿಜಾಲನಿರಾಣಿ ಶುಗರ‍್ಸ್ ಲಿ. ೨೦೨೫ರ ಜ.೦೨ರೊಳಗೆ ನೊಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶ; ರೈತ ಸಂಘಟನೆಗಳ ಹೋರಾಟಕ್ಕೆ...

ನಿರಾಣಿ ಶುಗರ‍್ಸ್ ಲಿ. ೨೦೨೫ರ ಜ.೦೨ರೊಳಗೆ ನೊಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶ; ರೈತ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯ: ಅಂಕನಹಳ್ಳಿ ತಿಮ್ಮಪ್ಪ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಗುತ್ತಿಗೆ ಪಡೆದಿರುವ ನಿರಾಣಿ ಶುಗರ‍್ಸ್ ಲಿ.ನವರು ೨೦೨೫ರ ಜ.೦೨ರೊಳಗೆ ನೊಂದಣಿ ಮಾಡಿಸಿಕೊಳ್ಳುವಂತೆ
ಸರ್ಕಾರ ಆದೇಶ ಮಾಡಿರುವುದು ರೈತ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿತಿಮ್ಮಪ್ಪ ಹೇಳಿದರು.

ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಸ್ಥಗಿತಗೊಳಿಸಿ ಕಾರ್ಖಾನೆಯಿಂದ ಹೊರ ಹೋಗಿದ್ದರು. ಅಂದಿನಿoದ ಹೋರಾಟ ನಡೆಸುತ್ತಿದ್ದ ಕಬ್ಬು
ಬೆಳೆಗಾರರು ಸೇರಿದಂತೆ ಈ ಭಾಗದ ರೈತರಿಗೆ ಈ ಆದೇಶ ಫಲ ದೊರೆತಂತಾಗಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ವತಿಯಿಂದ ಎಲ್ಲಾ ಪದಾಧಿಕಾರಿಗಳು ನಿರಾಣಿ ಶುರ‍್ಸ್ನ ಮಾಲೀಕರು ಮತ್ತು ಸಂಬoಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಕಬ್ಬು ಅರೆಯುವ ಕಾರ್ಯ ಆರಂಭಿಸುವoತೆ ಮನವಿ ಮಾಡಲಾಗಿದ್ದು ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ೨೦೨೫ರ ಆಗಸ್ಟ್ ತಿಂಗಳಿನಿoದ ಕಬ್ಬು ಅರೆಯುವ ಭರವಸೆ ನೀಡಿದ್ದಾರೆ.

ಆದ್ದರಿಂದ ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ನಾಟಿ ಮಾಡುವಂತೆ ಮನವಿ ಮಾಡಿದರು.
ಕಾರ್ಖಾನೆ ಆರಂಭವಾದರೆ ರೈತರಿಗೆ ಅನುಕೂಲವಾಗುವುದರ ಜತೆಗೆ ವ್ಯಾಪಾರಸ್ಥರಿಗೆ ಹಾಗೂ ಚುಂಚನಕಟ್ಟೆ ಭಾಗದಲ್ಲಿ ಆರ್ಥಿಕ ವ್ಯವಹಾರಗಳು ಹೆಚ್ಚಳವಾಗುವುದಲ್ಲದೆ ಕೂ ಕಾರ್ಮಿಕರಿಗೂ ಉದ್ಯೋಗ ದೊರೆಯಲಿದೆ ಎಂದು ಅಭಿಪ್ರಾಯಪಟ್ಟ ಅಂಕನಹಳ್ಳಿತಿಮ್ಮಪ್ಪ ಇದಕ್ಕೆ ಎಲ್ಲ ರಾಜಕೀಯ ಪಕ್ಷದ ಮುಖಂಡರು ಬೆಂಬಲ
ನೀಡುಬೇಕೆಂದು ಕೋರಿದರು.

ಸರ್ಕಾರದ ವತಿಯಿಂದ ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಭತ್ತ ಖರೀದಿ ಮಾಡಲು ನವೆಂಬರ್ ತಿಂಗಳಲ್ಲಿ
ಆರಂಭಿಸಿ ಡಿಸೆಂಬರ್ ತಿಂಗಳಿನಿoದ ಭತ್ತ ಖರೀದಿ ಮಾಡಬೇಕು ಆಗ ಬೆಳೆ ಬೆಳೆದ ರೈತರು ಕಣದಿಂದ
ನೇರವಾಗಿ ಖರೀದಿ ಕೇಂದ್ರಕ್ಕೆ ಸಾಗಾಣೆ ಮಾಡಲಿದ್ದಾರೆ ಇದರಿಂದ ರೈತರಿಗೆ ಸಾಗಾಣಿಕಾ ವೆಚ್ಚ ಕಡಿಮೆಯಾಗಲಿದೆ ಅದಕ್ಕಾಗಿ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಪಿ.ಶಿವರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಜಿತೇಂದ್ರ, ಜಿಲ್ಲಾ ಉಪಾಧ್ಯಕ್ಷ ವಿಶ್ವಾಸ್, ತಾಲೂಕು ಕಾರ್ಯದರ್ಶೀ ಹರಂಬಳ್ಳಿರಮೇಶ್, ಸಂಘಟನಾ ಕಾರ್ಯದರ್ಶಿ ದಿನೇಶ್, ರೈತ ಮುಖಂಡ ರುದ್ರೇಶ್ ಇದ್ದರು.

RELATED ARTICLES
- Advertisment -
Google search engine

Most Popular