Friday, April 4, 2025
Google search engine

Homeರಾಜ್ಯಕೇಂದ್ರದ ಪ್ರೀ ಬಜೆಟ್ ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ ಸೀತರಾಮನ್ ಪತ್ರ

ಕೇಂದ್ರದ ಪ್ರೀ ಬಜೆಟ್ ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯಗೆ ನಿರ್ಮಲಾ ಸೀತರಾಮನ್ ಪತ್ರ

ಬೆಂಗಳೂರು: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.0 ಸರ್ಕಾರದ ಮೊದಲ ಸಮಗ್ರ ಬಜೆಟ್‌ ಅನ್ನು ಜುಲೈನಲ್ಲಿ ಮಂಡಿಸಲಿದ್ದಾರೆ.

ಈ ಬೆನ್ನಲ್ಲೆ ಕರ್ನಾಟಕದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರ ಬರೆದು ಕೇಂದ್ರದ ಪ್ರೀ ಬಜೆಟ್ ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ.

ಜೂ.22ರಂದು ದೆಹಲಿಯಲ್ಲಿ ನಡೆಯುವ ಪ್ರೀ ಬಜೆಟ್ ಸಭೆಯಲ್ಲಿ ರಾಜ್ಯದ ಪರ ಭಾಗವಹಿಸಲು ಸಿಎಂಗೆ ಆಹ್ವಾನ ನೀಡಲಾಗಿದ್ದು ನಿರ್ಮಲಾ ಸೀತರಾಮನ್ ಪತ್ರಕ್ಕೆ ಸಿಎಂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಭಾಗಿಯಾಗಲು ಅಹ್ವಾನಿಸಿದ್ದಕ್ಕೆ ಧನ್ಯವಾದಗಳು. ಜೂ.22ರಂದು ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ನಾನು ಮೀಟಿಂಗ್​​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ನನ್ಮ ಬದಲು ನನ್ನ ಸಂಪುಟದ ಸಹೋದ್ಯೋಗಿ ಸಚಿವ ಕೃಷ್ಣಭೈರೇಗೌಡ ಭಾಗಿ ಆಗ್ತಾರೆ ಎಂದು ಸಚಿವೆ ನಿರ್ಮಲಾ ಸೀತರಾಮನ್ ಪತ್ರಕ್ಕೆ ಸಿಎಂ ಉತ್ತರ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಸಚಿವೆ ನಿರ್ಮಲಾ ಸಿತಾರಾಮನ್ ಭಾರತೀಯ ಕೈಗಾರಿಕಾ ಒಕ್ಕೂಟ ಸಂಘಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸಲಿದ್ದಾರೆ.

ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಗುರುವಾರ ಸಂಜೆ 4 ರಿಂದ 6 ರವರೆಗೆ ನಡೆಯಲಿರುವ ಸಭೆಯಲ್ಲಿ ಭಾರತೀಯ ವಾಣಿಜ್ಯ ಮತ್ತು ಉದ್ಯಮಗಳ ಒಕ್ಕೂಟ (ಎಫ್‌ಐಸಿಸಿಐ), ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ಆಫ್ ಇಂಡಿಯಾ (ಅಸೋಚಾಮ್) , PHD ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತಮ್ಮ ಬಜೆಟ್ ಸಲಹೆಗಳು ಮತ್ತು ಶಿಫಾರಸುಗಳನ್ನು ಪ್ರಸ್ತುತಪಡಿಸುತ್ತಿವೆ.

RELATED ARTICLES
- Advertisment -
Google search engine

Most Popular