Friday, April 4, 2025
Google search engine

Homeದೇಶರಿಲಯನ್ಸ್ ಬೋರ್ಡ್ ಸದಸ್ಯ ಸ್ಥಾನಕ್ಕೆ ನೀತಾ ಅಂಬಾನಿ ರಾಜೀನಾಮೆ

ರಿಲಯನ್ಸ್ ಬೋರ್ಡ್ ಸದಸ್ಯ ಸ್ಥಾನಕ್ಕೆ ನೀತಾ ಅಂಬಾನಿ ರಾಜೀನಾಮೆ

ಮುಂಬೈ: ಭಾರತ ಅತ್ಯಮೂಲ್ಯ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್ ಇದೀಗ ಮಹತ್ವದ ನಿರ್ಧಾರ ಘೋಷಿಸಿದೆ. ಇಂದು ಮುಂಬೈನಲ್ಲಿ ನಡೆದ ೪೬ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಚೇರ್ಮೆನ್ ಮುಕೇಶ್ ಅಂಬಾನಿ ಈ ಘೋಷಣೆ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸದಸ್ಯ ಸ್ಥಾನಕ್ಕೆ ನೀತಾ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಇದೀಗ ಮಂಡಳಿಗೆ ಅಂಬಾನಿ ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿಯನ್ನು ಸೇರಿಸಲಾಗಿದೆ.

ನೀತಾ ಅಂಬಾನಿ ರಾಜೀನಾಮೆಯನ್ನು ರಿಲಯನ್ಸ್ ಇಂಡಸ್ಟ್ರೀ ಸ್ವೀಕರಿಸಿದೆ. ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸಮಿತಿಗೆ ಮಾತ್ರ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿ ನೀತಾ ಅಂಬಾನಿ ಮುಂದುವರಿಯಲಿದ್ದಾರೆ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ. ರಿಲಯನ್ಸ್ ಫೌಂಡೇಶನ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ಭಾರತದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ನೀತಾ ಅಂಬಾನಿ ರಿಲಯನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದೀದ ನೀತಾ ಅಂಬಾನಿ ತಮ್ಮ ಎಲ್ಲಾ ಶ್ರಮ ಹಾಗೂ ಶಕ್ತಿಯನ್ನು ಫೌಂಡೇಶನ್‌ಗೆ ಬಳಸಿಕೊಳ್ಳಲಿದ್ದಾರೆ. ನೀತಾ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ಮುಕೇಶ್ ಹೇಳಿದ್ದಾರೆ.

ಭಾರತದ ಮೇಲೆ ರಿಲಯನ್ಸ್ ಫೌಂಡೇಷನ್ ಮತ್ತಷ್ಟು ದೊಡ್ಡ ಮಟ್ಟದ ಪರಿಣಾಮ ಉಂಟುಮಾಡಲು ಸಾಧ್ಯವಾಗುವಂತೆ ಬೆಳೆಸಲು ಹಾಗೂ ಮಾರ್ಗದರ್ಶನ ನೀಡಲು ತಮ್ಮ ಉತ್ಸಾಹ ಹಾಗೂ ಸಮಯವನ್ನು ಮೀಸಲಿಡಲು ಬಯಸಿರುವ ನೀತಾ ಅಂಬಾನಿ ಅವರ ನಿರ್ಧಾರವನ್ನು ಗೌರವಿಸಿರುವ ನಿರ್ದೇಶಕರ ಮಂಡಳಿಯು, ಅವರ ರಾಜೀನಾಮೆಯನ್ನು ಸ್ವೀಕರಿಸಿದೆ. ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರ ನಾಯಕತ್ವವನ್ನು ನಿರ್ದೇಶಕರ ಮಂಡಳಿ ಶ್ಲಾಘಿಸಿದೆ.

ವಿಶ್ವ ದಾಖಲೆ ಬರೆದ ಆಕಾಶ್ ಅಂಬಾನಿ ಉದ್ಯಮ, ಇನ್ಮುಂದೆ ಅತ್ಯಂತ ವೇಗದೊಂದಿಗೆ ಜಿಯೋ ಲಭ್ಯ ರೀಟೇಲ್, ಡಿಜಿಟಲ್ ಸೇವೆಗಳು ಮತ್ತು ಸರಕು ವ್ಯವಹಾರಗಳು ಸೇರಿದಂತೆ ಆರ್‌ಐಎಲ್‌ನ ಪ್ರಮುಖ ವ್ಯವಹಾರಗಳನ್ನು ಮುನ್ನಡೆಸುವ ಹಾಗೂ ನಿರ್ವಹಿಸುವ ಕಾರ್ಯದಲ್ಲಿ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಐಎಲ್‌ನ ಪ್ರಮುಖ ಅಂಗ ಸಂಸ್ಥೆಗಳ ಮಂಡಳಿಗಳಲ್ಲಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆರ್‌ಐಎಲ್ ಮಂಡಳಿಗೆ ಅವರ ನೇಮಕಾತಿಯು, ಅವರ ದೃಷ್ಟಿಕೋನ ಮತ್ತು ಹೊಸ ಆಲೋಚನೆಗಳಿಂದ ಕಂಪೆನಿಯ ಉನ್ನತಿಗೆ ನೆರವಾಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

RELATED ARTICLES
- Advertisment -
Google search engine

Most Popular