Wednesday, April 23, 2025
Google search engine

Homeರಾಜ್ಯರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.





ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ತಿಳಿದಿಲ್ಲ. ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಕಾಗೆ ಅವರ ಹೇಳಿಕೆ ನಾನು ನೋಡಿಲ್ಲ. ನಮ್ಮ ಸರ್ಕಾರ ಬಂದಾಗಿನಿಂದ ಬರಕ್ಕೆ ಅನುದಾನ ಕೊಟ್ಟಿದ್ದೇವೆ. ರೈತರಿಗೆ ವಿಮೆ ಕೂಡಾ ಜಾಸ್ತಿ ಕ್ಲೈಮ್ ಆಗಿದೆ. ಯಾವ ಹಿನ್ನಲೆಯಲ್ಲಿ ಅವರು ಹೇಳಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ಯಾವ ಕೆಲಸವೂ ನಿಂತಿಲ್ಲ. ಜಲಜೀವನ್ ಮಿಷನ್, ಪ್ರಗತಿ ಪಥ, ಕಲ್ಯಾಣ ಪಥ ಸೇರಿ ಎಲ್ಲಾ ಕೆಲಸಗಳು ನಡೆಯುತ್ತಿದೆ ಎಂದು ತಿಳಿಸಿದರು.

ನಮಗೆ ಗ್ಯಾರಂಟಿ ಯೋಜನೆಗಳ ಜವಾಬ್ದಾರಿ ಇದೆ. ಗ್ಯಾರಂಟಿಯಿಂದ ಜನರಿಗೆ ಆರ್ಥಿಕ ಸ್ಥಿರತೆ ಬರುತ್ತಿದೆ. ಜನರ ಜೀವನ ಉತ್ತಮವಾಗಿ ನಡೆಯುತ್ತಿದೆ. ಅಭಿವೃದ್ಧಿ ನಿಂತ ನೀರು ಆಗುವುದಿಲ್ಲ. ಶಾಸಕರು ಏನೇ ಸಮಸ್ಯೆಯಿದ್ದರೂ ಸಿಎಂ ಜೊತೆ ಮಾತಾಡಲಿ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular