Friday, April 18, 2025
Google search engine

Homeರಾಜ್ಯತಿರುಪತಿಯಲ್ಲಿ ರಾಜ್ಯದ ಯಾವ ಭಕ್ತರಿಗೂ ತೊಂದರೆಯಾಗಿಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ತಿರುಪತಿಯಲ್ಲಿ ರಾಜ್ಯದ ಯಾವ ಭಕ್ತರಿಗೂ ತೊಂದರೆಯಾಗಿಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು : ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವಿಚಾರವಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಪತಿಯಲ್ಲಿ ರಾಜ್ಯದ ಭಕ್ತರಿಗೆ ಯಾವುದೇ ರೀತಿಯಾದ ತೊಂದರೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಿರುಪತಿಯಲ್ಲಿ ರಾಜ್ಯದ ಯಾವ ಭಕ್ತರಿಗೂ ತೊಂದರೆಯಾಗಿಲ್ಲ. ರಾಜ್ಯದ ಎಂಡೋಮೆಂಟ್ ಅಧಿಕಾರಿಯ ಜೊತೆ ನಾನು ಸಂಪರ್ಕದಲ್ಲಿ ಇದ್ದೇನೆ. ತಿರುಪತಿಯಲ್ಲಿ ಕರ್ನಾಟಕ ಭವನದ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಸ್ನಾನ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.ಅಲ್ಲಿ ತಕ್ಷಣಕ್ಕೆ ಬೇಕಾಗುವ ಅಗತ್ಯ ಕ್ರಮಕ್ಕೆ ಸ್ಪಂದಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಬಳ್ಳಾರಿ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಯಾವುದೇ ಮಹಿಳೆ ಸಾವನ್ನಪ್ಪಿಲ್ಲ ಎಂದು ತಿಳಿಸಿದ್ದಾರೆ.

ಭೀಕರ ಕಾಲ್ತುಳಿತದಲ್ಲಿ ಕೇರಳ ಮೂಲದ ಮಹಿಳೆ ನಿರ್ಮಲಾ (50) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ. . ಇನ್ನೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರುಯು ಆಸ್ಪತ್ರೆಗೆ ಕರೆದೊಯ್ಯಲಾಯಿತು.

RELATED ARTICLES
- Advertisment -
Google search engine

Most Popular