Friday, April 18, 2025
Google search engine

HomeUncategorizedರಾಷ್ಟ್ರೀಯನೀಟ್-ಯುಜಿ ಮರುಪರೀಕ್ಷೆ ಅಗತ್ಯವಿಲ್ಲ: ಸುಪ್ರೀಂ ಅರ್ಜಿ ವಜಾ

ನೀಟ್-ಯುಜಿ ಮರುಪರೀಕ್ಷೆ ಅಗತ್ಯವಿಲ್ಲ: ಸುಪ್ರೀಂ ಅರ್ಜಿ ವಜಾ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಪಟ್ನಾ, ಹಜಾರಿಬಾಗ್‌ ನಲ್ಲಿ ಮಾತ್ರ ಸೋರಿಕೆಯಾಗಿದೆ. ಎರಡು ನಗರ ಹೊರತುಪಡಿಸಿ ಬೇರೆಡೆ ಎಲ್ಲೂ ಸೋರಿಕೆಯಾಗಿಲ್ಲ ಹೀಗಾಗಿ ನೀಟ್-ಯುಜಿ ಮರುಪರೀಕ್ಷೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ನೀಟ್-ಯುಜಿ ಮರುಪರೀಕ್ಷೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ , ಬಿಹಾರದ ಪಾಟ್ನಾ ಹಝಾರಿಭಾಗ್ ನಲ್ಲಿ ಮಾತ್ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಬೇರೆ ಎಲ್ಲೂ ವ್ಯವಸ್ಥಿತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಹೀಗಾಗಿ ನೀಟ್ ಯುಜಿ ಮರುಪರೀಕ್ಷೆ ಅಗತ್ಯವಿಲ್ಲ ಎಂದಿದೆ.

‘ನೀಟ್‌-ಯುಜಿ 2024’ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ಪಟ್ನಾ, ಹಜಾರಿಬಾಗ್‌ಗೆ ಸೀಮಿತವಾಗಿದ್ದು, ಪ್ರಕರಣದಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಲಾಗಿದೆ. ಈ ರೀತಿಯ ಸಮಸ್ಯೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

RELATED ARTICLES
- Advertisment -
Google search engine

Most Popular