ಮಂಡ್ಯ: ಮಾಜಿ ಸಿಎಂ ಹೆಚ್ಡಿಕೆ 25 ರಿಂದ 30 ಶಾಸಕರನ್ನು ಇಟ್ಟುಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರು. ನಾವು130 ಕ್ಕೂ ಹೆಚ್ಚು ಶಾಸಕರಿದ್ದೇವೆ. ಸುಭದ್ರ ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಉದಯ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಮದ್ದೂರಿನ ಸಾದೊಳಲು ಗ್ರಾಮದಲ್ಲಿ ಮಾತನಾಡಿದ ಶಾಸಕ ಉದಯ್, ಐದು ವರ್ಷ ಸಂಪೂರ್ಣ ಆಡಳಿತ ಮಾಡ್ತೇವೆ. ಕುಮಾರಸ್ವಾಮಿ ತಿರುಕನ ಕನಸು ಕಾಣ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.