Thursday, April 10, 2025
Google search engine

Homeಅಪರಾಧಪತ್ನಿ, ರಕ್ತ ಸಂಬಂಧಿ, ವಕೀಲರನ್ನು ಹೊರತುಪಡಿಸಿ ಇನ್ನು ಯಾರಿಗೂ ಇಲ್ಲ ದರ್ಶನ್ ಭೇಟಿಗೆ ಅವಕಾಶ

ಪತ್ನಿ, ರಕ್ತ ಸಂಬಂಧಿ, ವಕೀಲರನ್ನು ಹೊರತುಪಡಿಸಿ ಇನ್ನು ಯಾರಿಗೂ ಇಲ್ಲ ದರ್ಶನ್ ಭೇಟಿಗೆ ಅವಕಾಶ

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ನಟ ದರ್ಶನ್‌ ಮೇಲೆ ಬಳ್ಳಾರಿ ಜೈಲಿನಲ್ಲಿ ಕಟ್ಟೆಚ್ಚರ ವಹಿಸಬೇಕು. ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ 24/7 ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಬೇಕು ಸೇರಿದಂತೆ ವಿವಿಧ ಕಠಿಣ ನಿಯಮ ಕೈಗೊಳ್ಳುವಂತೆ ಜೈಲಿನ ಅಧೀಕ್ಷಕರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರ ವಲಯ ಡಿಐಜಿ ಟಿ.ಪಿ. ಶೇಷ ಜ್ಞಾಪನಾ ಪತ್ರ ಬರೆದಿದ್ದಾರೆ.

ಜೈಲಿನಲ್ಲಿ ದರ್ಶನ್‌ನನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ಕಟ್ಟೆಚ್ಚರ ವಹಿಸಬೇಕು ಎಂಬ ಬಗ್ಗೆ ಪತ್ರ ಬರೆದಿರುವ ಡಿಐಜಿ, ದರ್ಶನ್‌ನನ್ನು ಸಾಮಾನ್ಯ ಬಂಧಿಯಂತೆಯೇ ಪರಿಗಣಿಸಿ ಅಷ್ಟೇ ಸೌಲಭ್ಯ ಒದಗಿಸಬೇಕು. ಬೇರೆ ಕೈದಿಗಳ ಜತೆಗೆ ಆತ ಬೆರೆಯವಂತಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಇಡಬೇಕು. ಆ ಕೊಠಡಿಯೊಳಗೆ 24/7 ಸಿಸಿ ಕ್ಯಾಮೆರಾ ಇರಿಸಬೇಕು. ಪ್ರತಿಕ್ಷಣದ ಸಿಸಿ ಕ್ಯಾಮೆರಾ ದೃಶ್ಯಾವಳಿ ಶೇಖರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ದರ್ಶನ್‌ ಭೇಟಿಗೆ ಪತ್ನಿ, ರಕ್ತ ಸಂಬಂಧಿ,ವಕೀಲರಿಗೆ ಮಾತ್ರ ಅವಕಾಶ ನೀಡಬೇಕು. ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು, ಅಭಿಮಾನಿಗಳಿಗೆ ಅವಕಾಶ ನೀಡಬಾರದು. ದರ್ಶನ್‌ ಇರುವ ಸೆಲ್‌ ಬಳಿ ಪ್ರತ್ಯೇಕವಾಗಿ ಮುಖ್ಯ ವೀಕ್ಷಕಅಧಿಕಾರಿಯನ್ನು ನಿಯೋಜಿಸಬೇಕು. ನಿತ್ಯ ಜೈಲರ್‌ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಬೀಗ ಹಾಕಬೇಕು ಹಾಗೂ ಬೀಗ ತೆರೆಯಬೇಕು. ಸೆಲ್‌ಗೆ ನಿಯೋಜಿಸುವ ಸಿಬಂದಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular