Tuesday, April 8, 2025
Google search engine

Homeರಾಜ್ಯನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಹಕ್ಕಿಲ್ಲ: ಬಿ.ಶ್ರೀರಾಮುಲು

ನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಹಕ್ಕಿಲ್ಲ: ಬಿ.ಶ್ರೀರಾಮುಲು

ವಿಜಯಪುರ : ನನಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಸ್ನೇಹಿತರೇ. ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಕೂಡ ಹೇಳಿದ್ದಾರೆ. ಸಲಹೆಯನ್ನೂ ನೀಡಿದ್ದಾರೆ. ಹಾಗಂತ ನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂಬುದಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಸ್ವಪಕ್ಷೀಯ ನಾಯಕರಿಗೆ ಕೌಂಟರ್ ಕೊಟ್ಟಿದ್ದಾರೆ.

ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನನಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಸದ್ಯಕ್ಕೆ ಸಂಸತ್ ಕಲಾಪ ನಡೆಯುತ್ತಿರುವುದರಿಂದ ಫೆಬ್ರವರಿ.5ರ ನಂತ್ರ ದೆಹಲಿಗೆ ತೆರಳಲಿದ್ದೇನೆ. ಅಲ್ಲಿ ರಾಷ್ಟ್ರದ ನಾಯಕರನ್ನು ಭೇಟಿಯಾಗುತ್ತೇನೆ ಎಂಬುದಾಗಿ ತಿಳಿಸಿದರು.

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ. 2028ರಲ್ಲಿ ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿದು ಪಕ್ಷ ಕಟ್ಟುವಂತ ಕೆಲಸ ಮಾಡಲಿದ್ದೇವೆ. ಕೆಲವೆಡೆ ಅಪಸ್ವರ ಎದ್ದಿದೆ. ಎಲ್ಲಾ ಪಕ್ಷದಲ್ಲೂ ಅಸಮಾಧಾನ ಸಾಮಾನ್ಯ. ಅದನ್ನೆಲ್ಲ ಬಿಜೆಪಿ ವರಿಷ್ಠರು ಸರಿ ಪಡಿಸಲಿದ್ದಾರೆ ಎಂಬುದಾಗಿ ಹೇಳಿದರು.

RELATED ARTICLES
- Advertisment -
Google search engine

Most Popular