Friday, April 4, 2025
Google search engine

Homeರಾಜಕೀಯಕೋವಿಡ್ ವಿಚಾರದಲ್ಲಿ ಯಾರೂ ಗಾಬರಿಯಾಗುವುದು ಬೇಡ-ಡಿಸಿಎಂ ಡಿ.ಕೆ ಶಿವಕುಮಾರ್

ಕೋವಿಡ್ ವಿಚಾರದಲ್ಲಿ ಯಾರೂ ಗಾಬರಿಯಾಗುವುದು ಬೇಡ-ಡಿಸಿಎಂ ಡಿ.ಕೆ ಶಿವಕುಮಾರ್

ನವದೆಹಲಿ: ಕೋವಿಡ್ ವಿಚಾರದಲ್ಲಿ ಯಾರೂ ಗಾಬರಿಯಾಗುವುದು ಬೇಡ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೋವಿಡ್ ಹೆಚ್ಚಾಗಿದೆ ಅಂತ ಅಂದುಕೊಳ್ಳಬೇಡಿ. ನಾವು ಎಲ್ಲಾ ಮಾಹಿತಿಯನ್ನು ಮಾಧ್ಯಮಕ್ಕೂ ಸಹ ನೀಡುತ್ತೇವೆ. ಈಗಾಗಲೇ ಜನರು ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಆದರೆ ಯಾರು ಸದ್ಯಕ್ಕೆ ಗಾಬರಿ ಪಡುವುದು ಬೇಡ ಎಂದರು.
ಇನ್ನು ನಾನು ಸಹ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ. ನಿರ್ಮಲಾ ಸೀತಾರಾಮನ್ ಸೇರಿ ಕೆಲ ಕೇಂದ್ರ ಸಚಿವರ ಭೇಟಿಗೂ ಸಮಯ ಕೇಳಿದ್ದೇನೆ. ಕಾಂಗ್ರೆಸ್ ಕೆಲ ವರಿಷ್ಠರ ಭೇಟಿಗೆ ಆಗಮಿಸಿದ್ದೇವೆ. ಇಂದು ಪಕ್ಷದ ಸಭೆ ಇದೆ. ನಿಗಮ ಮಂಡಳಿ ನೇಮಕ ಫೈನಲ್ ಮಾಡುತ್ತೇವೆ. ಎಷ್ಟು ಅಂತ ಹೇಳೋಕೆ ಆಗಲ್ಲ. ಫಸ್ಟ್ ಲೀಸ್ಟ್ ನಲ್ಲಿ ಶಾಸಕರದ್ದು ಫೈನಲ್ ಮಾಡುತ್ತೇವೆ. ಮೂರು ಹಂತಗಳಲ್ಲಿ ನಿಗಮ ಮಂಡಳಿ ಅಂತಿಮ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular