Saturday, May 10, 2025
Google search engine

Homeರಾಜ್ಯಯುದ್ಧ ಯಾರಿಗೂ ಬೇಡ, ಯುದ್ಧ ಆಗಬೇಕು ಅಂತ ಬಯಸೋದು ಸರಿಯಲ್ಲ : ಸಚಿವ ದಿನೇಶ್ ಗುಂಡೂರಾವ್

ಯುದ್ಧ ಯಾರಿಗೂ ಬೇಡ, ಯುದ್ಧ ಆಗಬೇಕು ಅಂತ ಬಯಸೋದು ಸರಿಯಲ್ಲ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ನಡೆಯುತ್ತಿದ್ದು, ಭಾರತೀಯ ಸೈನಿಕರಿಗೆ ಬೆಂಬಲ ಸೂಚಿಸಿ ಇಂದು ಕಾಂಗ್ರೆಸ್ ಪಕ್ಷಾತೀತವಾಗಿ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಯುದ್ಧ ಯಾರಿಗೂ ಬೇಡ ಯುದ್ಧ ಆಗಬೇಕು ಅಂತ ಬಯಸುವುದು ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.

ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಯುದ್ಧ ಆಗಬೇಕು ಅಂತ ಬಯಸುವುದು ಸರಿಯಲ್ಲ. ಆದರೆ ಪಾಕಿಸ್ತಾನ ಮಾತ್ರ ಪದೇ ಪದೇ ಭಾರತವನ್ನು ಕೆಣಕುತ್ತಿರುವುದು ಕಂಡುಬರುತ್ತದೆ. ಇವತ್ತು ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಹೋರಾಡುತ್ತಿದೆ ಎಂದು ತಿಳಿಸಿದರು.

ಸೇನೆಗೆ ಬೆಂಬಲ ಸೂಚಿಸಲು ನಾವು ತಿರಂಗಾ ಯಾತ್ರೆ ಮಾಡುತ್ತಿದ್ದೇವೆ. ಸದ್ಯ ಭಾರತ ಪಾಕಿಸ್ತಾನದ ನಡುವೆ ಕದನ ಆಗುತ್ತಿದೆ. ಇದರಲ್ಲಿ ಭಾರತಕ್ಕೆ ಜಯ ಸಿಗಬೇಕು. ಭಾರತೀಯ ಸೇನೆಗೆ ನಾವೆಲ್ಲರೂ ಬೆಂಬಲ ಕೊಡಬೇಕು. ಯುದ್ಧ ಯಾರಿಗೂ ಬೇಡ. ಆದರೆ ಪಾಕಿಸ್ತಾನ ಮತ್ತೆ ಯೋಚನೆ ಮಾಡದಂತೆ ಬುದ್ಧಿ ಕಲಿಸಬೇಕು ಎಂದು ತಿರಂಗಾ ಯಾತ್ರೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular