Monday, April 21, 2025
Google search engine

Homeರಾಜ್ಯವಿದೇಶಿ ಕಾರ್ಮಿಕರಿಗೆ ಭಾರತದಲ್ಲಿ ಪಿಎಫ್, ಪಿಂಚಣಿ ಸೌಲಭ್ಯ ಇಲ್ಲ: ಹೈಕೋರ್ಟ್

ವಿದೇಶಿ ಕಾರ್ಮಿಕರಿಗೆ ಭಾರತದಲ್ಲಿ ಪಿಎಫ್, ಪಿಂಚಣಿ ಸೌಲಭ್ಯ ಇಲ್ಲ: ಹೈಕೋರ್ಟ್

ಬೆಂಗಳೂರು: ದೇಶದಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರನ್ನು ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ಪಿಂಚಣಿ (ಇಪಿ) ಯೋಜನೆ ವ್ಯಾಪ್ತಿಗೆ ಒಳಪಡಿಸಿ ಕೇಂದ್ರ ಸರ್ಕಾರ ೨೦೦೮ರಲ್ಲಿ ಜಾರಿಗೊಳಿಸಿದ್ದ ತಿದ್ದುಪಡಿ ಕಾನೂನು ಅಸಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದೆ.

ತಿದ್ದುಪಡಿ ಕಾನೂನು ಪ್ರಶ್ನಿಸಿ ಸ್ಟೋನ್ ಹಿಲ್ ಎಜುಕೇಷನ್ ಫೌಂಡೇಷನ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮ ಲೇಖಾ ಅವರ ಪೀಠ ಈ ಆದೇಶ ಮಾಡಿ ತಿದ್ದುಪಡಿ ಕಾನೂನನ್ನು ರದ್ದುಪಡಿಸಿದೆ. ಕೇಂದ್ರ ಸರ್ಕಾರ ಯಾವುದೇ ವೇತನ ಮಿತಿ ಇಲ್ಲದೆ ವಿದೇಶಿ ಕಾರ್ಮಿಕರನ್ನು ಇಪಿಎಫ್ ಮತ್ತು ಇಪಿ ವ್ಯಾಪ್ತಿಗೆ ಒಳಪಡಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ೨೦೦೮ರ ಅ.೧ರಿಂದ ಜಾರಿಗೆ ಬರುವಂತೆ ಮಾಡಿದೆ. ಭಾರತದಿಂದ ಹೊರದೇಶಕ್ಕೆ ಸೇವೆಯ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗು ಉದ್ದೇಶದಿಂದ ಕಾಯ್ದೆಗಳನ್ನು ರೂಪಿಸಲಾಗಿದೆ.

ಕೇಂದ್ರವು ೨೦೦೮ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ಪಿಂಚಣಿ (ಇಪಿ) ಕಾಯ್ದೆಗೆ ತಿದ್ದುಪಡಿ ತಂದಿತ್ತು. ವಿದೇಶಿ ಕಾರ್ಮಿಕರಿಗೆ ವೇತನ ಮಿತಿ ಇಲ್ಲದೆ ಇಪಿ ಮತ್ತು ಇಪಿಎಫ್ ಸೌಲಭ್ಯ ಪಡೆ ಯಲು ಅವಕಾಶ ಮಾಡಿಕೊಟ್ಟಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಸಂಸ್ಥೆಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

RELATED ARTICLES
- Advertisment -
Google search engine

Most Popular