Sunday, April 20, 2025
Google search engine

Homeರಾಜ್ಯರಾಜಕೀಯ ಕ್ಷೇತ್ರದ ಬಗ್ಗೆ ಯಾವುದೇ ಆಸಕ್ತಿ ಇಲ್ಲ- ಡಾ.ಸಿ.ಎನ್. ಮಂಜುನಾಥ್

ರಾಜಕೀಯ ಕ್ಷೇತ್ರದ ಬಗ್ಗೆ ಯಾವುದೇ ಆಸಕ್ತಿ ಇಲ್ಲ- ಡಾ.ಸಿ.ಎನ್. ಮಂಜುನಾಥ್

ಬೆಂಗಳೂರು: ನನಗೆ ರಾಜಕೀಯ ಕ್ಷೇತ್ರದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಅಲ್ಲ ಎಂದು ಜಯದೇವ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ನನ್ನ ಮೊದಲ ಆಯ್ಕೆ ವೈದ್ಯಕೀಯ ಸೇವೆ ಎಂದು ಸ್ಪಷ್ಟಪಡಿಸಿದರು. ಈ ತಿಂಗಳು ನನ್ನ ನಿರ್ದೇಶಕ ಅವಧಿ ಮುಕ್ತಾಯವಾಗುತ್ತೆ. ೧೬ ವರ್ಷಗಳಿಂದ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಮೊದಲ ಆಯ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು. ಶೇ.೫೦೦ರಷ್ಟು ಅಭಿವೃದ್ಧಿ ನನ್ನ ಅವಧಿಯಲ್ಲಿಯೇ ಆಗಿದೆ. ನನ್ನ ಮುಂದುವರಿಸುವ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮುಂದುವರೆಸುವ ಬಗ್ಗೆ ನನ್ನ ಅಭಿಪ್ರಾಯ ಪಡೆದಿಲ್ಲ ಎಂದರು.

೩೦೦ ಹಾಸಿಗೆ ಇದ್ದ ಆಸ್ಪತ್ರೆ ಈಗ ೨ ಸಾವಿರಕ್ಕೆ ಏರಿಕೆ ಆಗಿದೆ. ನನ್ನ ಅವಧಿಯಲ್ಲಿ ೨ ಸಾವಿರ ಬೆಡ್ ಗಳಿರುವ ಆಸ್ಪತ್ರೆ ಆಗಿದೆ. ವಿಶ್ವಭೂಪಟದಲ್ಲಿ ಜಯದೇವ ಆಸ್ಪತ್ರೆಗೆ ಮಾನ್ಯತೆ ಸಿಕ್ಕಿದೆ ಎಂದರು.

RELATED ARTICLES
- Advertisment -
Google search engine

Most Popular