ಹುಣಸೂರು: ನನ್ನೂರಿನ ಋಣ ಮತ್ತು ಅಭಿಮಾನದ ಮುಂದೆ ಯಾವ ಅಧಿಕಾರನೂ ಶಾಶ್ವತವಲ್ಲ. ಆದ್ದರಿಂದ ನಿಮ್ಮನ್ನ ಎಂದೂ ಮರೆಯಲ್ಲ ಎಂದು ಟಿಎಪಿಸಿಎಂಎಸ್. ಅಧ್ಯಕ್ಷ ಬಸವಲಿಂಗಯ್ಯ ತಿಳಿಸಿದರು.
ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರದ ಟಿಎಪಿಸಿಎಂಎಸ್ ಅಧ್ಯಕ್ಷನಾಗಿರುವುದಕ್ಕೆ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರು ಹಾಗೂ ಅವರ ಮಗ ಶಾಸಕ ಜಿ.ಡಿ.ಹರೀಶ್ ಗೌಡರ ಆಶಯದಂತೆ ಒಬ್ಬ ದಲಿತ ಸಮುದಾಯದ ನನಗೆ 50 ವರ್ಷಗಳ ನಂತರ ಅಧಿಕಾರ ದೊರೆತಿದೆ ಎಂದರು.
ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ರವರ ಮೌಲ್ಯವನ್ನು ಅರಿತು ನಾನು ವಿದ್ಯಾವಂತ ನಾದ, ಕಾರಣ ತಡವಾಗಿಯಾದರೂ ಗ್ರಾಮಾಂತರ ಭಾಗದ ನನಗೆ ಅಧಿಕಾರ ಸಿಕ್ಕಿದೆ. ಆದ್ದರಿಂದ ಗ್ರಾಮೀಣ ಜನತೆ ತಮ್ಮ ಮಕ್ಕಳು ಶಿಕ್ಷಣ ಪಡೆಯುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಉಯಿಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭ ರಮೇಶ್ ಮಾತನಾಡಿ, ನಮ್ಮ ಭಾಗದ ದಲಿತ ಸಮುದಾಯದ ಹಿರಿಯ ಮುಖಂಡ ಬಸವಲಿಂಗಯ್ಯನವರು ನಗರದ ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಷಯವಾಗಿದೆ.ಆ ನಿಟ್ಟಿನಲ್ಲಿ ಅವರು ಉತ್ತಮ ಕಾರ್ಯ ನಿರ್ವಹಿಸಲಿ ಎಂದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಕುಡಿನೀರು ಮುದ್ದನಹಳ್ಳಿ ಸುರೇಶ್, ಕುಮಾರ್, ಮಹೇಶ್, ರಮೇಶ್, ದೊಡ್ಡಸ್ವಾಮಿಗೌಡ, ನಿವೃತ್ತ ಪ್ರಾಧ್ಯಾಪಕ ಸಣ್ಣಸ್ವಾಮೀಗೌಡ, ಶ್ರೀ ನಿವಾಸ್, ಪ್ರಕಾಶ್, ಮದೇವ್, ಬಲರಾಮ, ಶಿವಣ್ಣೇಗೌಡ, ಅಶೋಕ್, ಯ.ರಾಮೇಗೌಡ, ಪ.ವೆಳ್ಳಂಗಿರಿ ಇದ್ದರು.