Friday, April 4, 2025
Google search engine

Homeರಾಜ್ಯಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಅರ್ಹರಿಗೆ ಲಾಭ ಸಿಗಬೇಕು: ದಿನೇಶ್ ಗುಂಡೂರಾವ್

ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಅರ್ಹರಿಗೆ ಲಾಭ ಸಿಗಬೇಕು: ದಿನೇಶ್ ಗುಂಡೂರಾವ್

ಮಂಗಳೂರು(ದಕ್ಷಿಣ ಕನ್ನಡ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಯಾರಿಗೆ ಅಗತ್ಯ ಇದೆಯೋ ಅಂತಹವರಿಗೆ ಯೋಜನೆಯ ಲಾಭ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಮಂಗಳೂರಲ್ಲಿ ಇಂದು ಮಾಧ್ಯಮದವರೊಡನೆ ಮಾತನಾಡಿದ ಅವರು, ‘ಯೋಜನೆಯನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಕ್ರಮ ವಹಿಸಲಾಗುವುದು. ಯೋಜನೆ ಅನುಷ್ಠಾನದಲ್ಲಿ ಸೋರಿಕೆಯಾಗುವುದನ್ನು ತಪ್ಪಿಸಬೇಕು, ಅಗತ್ಯ ಇರುವವರಿಗೆ ಯೋಜನೆ ಸಿಗಬೇಕು.‌ ಇದು ಹೊಸ ಯೋಜನೆ ಆಗಿದ್ದು, ನ್ಯೂನತೆ ಇದ್ದರೆ ಸರಿಪಡಿಸಿಕೊಂಡು ಮುಂದುವರಿಸುತ್ತೇವೆ ಎಂದರು‌. ಅಗತ್ಯ ಇರುವವರಿಗೆ ಗ್ಯಾರಂಟಿ ಯೋಜನೆ ಸಿಗಬೇಕು, ಅರ್ಹತೆ ಇಲ್ಲದವರಿಗೆ ಸಿಕ್ಕಿದರೆ ಅದು ಸರ್ಕಾರಕ್ಕೆ ಹೊರೆ ಮತ್ತು ಯೋಜನೆಯ ಉದ್ದೇಶವೂ ಅಲ್ಲ. ಬಡವರು, ಅಗತ್ಯ ಇರುವವರಿಗೆ ಸಿಗಬೇಕು ಎಂಬುದು ಯೋಜನೆಯ ಉದ್ದೇಶ. ಸರ್ಕಾರದ ಹಣ ದುರುಪಯೋಗ ಆಗಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‌

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಪಡೆದು ಮಾನದಂಡಗಳ ಬಗ್ಗೆ ಚರ್ಚಿಸಲಾಗುವುದು ಎಂದರು. ನಗರದ ಹೊರ ವಲಯದ ಕೆತ್ತಿಕಲ್ ನಲ್ಲಿ ನಡೆದ ಗುಡ್ಡ ಕುಸಿತಕ್ಕೆ ಸಂಬಂಧಿಸಿ ತಜ್ಞರ ವರದಿ ಪಡೆದು ಸುರಕ್ಷತೆಗೆ ಕ್ರಮ‌ ವಹಿಸಲಾಗುವುದು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ತನಿಖೆ ನಡೆಯುತ್ತಿದ್ದು, ಈ ತಿಂಗಳ ಕೊನೆಯೊಳಗೆ ವರದಿ ಸಲ್ಲಿಕೆಯಾಗಲಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಭೂಮಿಯ ಜಾಗದ ಮಾಲೀಕರು ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ‌ ಪಡೆದಿರುವ ಕಂಪನಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular