Saturday, April 19, 2025
Google search engine

Homeಅಪರಾಧಕಾನೂನುಕರ್ನಾಟಕ ಕಾನೂನು ವಿವಿಗೆ ದಿನೇಶ್‌ ಗೂಳಿಗೌಡ ನಾಮನಿರ್ದೇಶನ

ಕರ್ನಾಟಕ ಕಾನೂನು ವಿವಿಗೆ ದಿನೇಶ್‌ ಗೂಳಿಗೌಡ ನಾಮನಿರ್ದೇಶನ

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ನ ಸದಸ್ಯರನ್ನಾಗಿ ವಿಧಾನಪರಿಷತ್‌ ಶಾಸಕ ದಿನೇಶ್‌ ಗೂಳಿಗೂಡ ಅವರನ್ನು ನಾಮನಿರ್ದೇಶನ ಮಾಡಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಆದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧಿನಿಯಮ 2009ರ ಸೆಕ್ಷನ್‌ 33 (1) (ಎಲ್‌‍) ರಂತೆ ಮಾರ್ಚ್‌ 14ರಿಂದ ನಾಮನಿರ್ದೇಶನ ಮಾಡಿರುವುದಾಗಿ ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.

ದಿನೇಶ್‌ ಗೂಳಿಗೌಡ ಅಭಿನಂದನೆ :
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದಕ್ಕೆ ಶಿಫಾರಸ್ಸು ಮಾಡಿದ ವಿಧಾನಪರಿಷತ್‌ನ ಸಭಾಪತಿಗಳಾದ ಬಸವರಾಜ್‌ ಹೊರಟ್ಟಿ ಅವರಿಗೆ ವಿಧಾನಪರಿಷತ್‌ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular