Friday, April 18, 2025
Google search engine

Homeರಾಜಕೀಯಕುಮಾರಸ್ವಾಮಿ ಅರೆಸ್ಟ್‌ ಮಾಡೋಕೆ ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ಸ್‌ಟೇಬಲ್ ಸಾಕು: ಸಿಎಂ ಸಿದ್ದರಾಮಯ್ಯ...

ಕುಮಾರಸ್ವಾಮಿ ಅರೆಸ್ಟ್‌ ಮಾಡೋಕೆ ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ಸ್‌ಟೇಬಲ್ ಸಾಕು: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ವಿಜಯಪುರ: ಮುಡಾದ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ ಅನುಮತಿ ನೀಡಿದ ನಂತರ ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿದೆ.

ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ವಿರುದ್ಧದ ಹಳೇ ಪ್ರಕರಣವನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಈ ಸಂಬಂಧ ಪ್ರಾಸಿಕ್ಯೂಷನ್​ ಅನುಮತಿ ನೀಡುವಂತೆ ಎಸ್​​ಐಟಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಇದರಿಂದ ಕೆರಳಿರುವ ಕುಮಾರಸ್ವಾಮಿ ಸಿದ್ದರಾಮಯ್ಯವರಂತಹ ನೂರು ಜನ ಬಂದರೂ ನನ್ನ ಅರೆಸ್ಟ್​ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಸಹ ತಿರುಗೇಟು ನೀಡಿದ್ದು, ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ಸ್‌ಟೇಬಲ್ ಸಾಕು ಎಂದು ಟಾಂಗ್ ಕೊಟ್ಟಿದ್ದಾರೆ.

ಇಂದು ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಅರೆಸ್ಟ್‌ ಮಾಡೋಕೆ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಸಾಕು, 100 ಸಿದ್ದರಾಮಯ್ಯ ಯಾಕೆ ಬೇಕು? ಅರೆಸ್ಟ್‌ ಮಾಡುವ ಕೆಲಸ ಪೊಲೀಸರದ್ದು, ನನ್ನದಲ್ಲ ಎಂದರು.

ಕುಮಾರಸ್ವಾಮಿ ನನಗೆ ಹೆದರಿಕೊಳ್ಳದೆ ಹೋಗಿದ್ದರೆ ಇಂದು ಪ್ರೆಸ್‌ಮೀಟ್‌ ಮಾಡುತ್ತಿದ್ದರಾ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಕುಮಾರಸ್ವಾಮಿದು ಬರೀ ಹಿಟ್‌ ಆ್ಯಂಡ್ ರನ್‌. ಯಾವ ಪ್ರಕರಣವನ್ನೂ ಕುಮಾರಸ್ವಾಮಿ ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿಲ್ಲ. ಪೆನ್‌ಡ್ರೈವ್‌, ಪೆನ್‌ಡ್ರೈವ್‌ ಅಂದರು ಎಂದು ವ್ಯಂಗ್ಯವಾಡಿದರು.

RELATED ARTICLES
- Advertisment -
Google search engine

Most Popular