Saturday, July 5, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರದ ಪ್ರಭಾ ಜ್ಯುವೆಲರ್ಸ್ ನಿಂದ ಮುಳ್ಳೂರು ಕ್ಲಸ್ಟರ್ ನ 450 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ಕೆ.ಆರ್.ನಗರದ ಪ್ರಭಾ ಜ್ಯುವೆಲರ್ಸ್ ನಿಂದ ಮುಳ್ಳೂರು ಕ್ಲಸ್ಟರ್ ನ 450 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಪ್ರಭಾ ರೈಸ್ ಮಿಲ್ ಮತ್ತು ಪ್ರಭಾ ಜ್ಯುವೆಲರ್ಸ್ ನಿಂದ ಹುಣಸೂರು ತಾಲೂಕಿನ ಮುಳ್ಳೂರು ಕ್ಲಸ್ಟರ್ ನ ಎಲ್ಲಾ ಶಾಲೆಗಳ ಒಟ್ಟು 450 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಪ್ರಭಾಜ್ಯುವೆಲರ್ಸ ಹಾಗೂ ಪ್ರಭಾ ರೈಸ್ ಮಿಲ್ ನ ಮಾಲಿಕರಾದ ಶ್ರೀನಿವಾಸ್ ರವರ ನೆನಪಿನಲ್ಲಿ ಅವರ ಮಕ್ಕಳು ವಿತರಣೆ ಮಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕ್ಲಸ್ಟರ್ ವ್ಯಾಪ್ತಿಗೆ ಬರುವ ಮುಳ್ಳೂರು , ಮುಳ್ಳೂರು ಪ್ರೌಢಶಾಲೆ ಹುಲ್ಯಾಳು, ಲಕ್ಕನ‌ಕೊಪ್ಪಲು ಮಾಚಬಾಯನಹಳ್ಳಿ, ಕಂತೆಗೌಡನ ಕೊಪ್ಪಲು, ಕೃಷ್ಣಾಪುರ, ತೊಂಡಾಳು, ಉಂಡವಾಡಿ, ಹೆಜ್ಜೋಡ್ಲು, ಅತ್ತಿಗುಪ್ಪೆ, ಶಿರಿಯೂರು ಶಾಲೆಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಳ್ಳೂರು ಕ್ಲಸ್ಟರ್ ನ ಮುಖ್ಯ ಶಿಕ್ಷಕರುಗಳಾದ ಮೋಹನ್ , ಮಹಾಲಕ್ಷ್ಮಿ, ಮೇರಿ ರೀಟಾ, ಪುಟ್ಟರಾಜು , ಶ್ರೀನಿವಾಸ್, ಸ್ವಾಮಿ, ದ್ರುವಣ್ಣ ,ಶೋಭಾ ,ಮಂಜುನಾಥ್ ,ರಂಗಸ್ವಾಮಿ, ದೇವಪ್ಪ ,ಹರೀಶ್, ಸಿ‌.ಆರ್.ಪಿ. ಎ.ಸಿ ಮಂಜುನಾಥ್, ಬಿ.ಆರ್.ಪಿ. ನಂದೀಶ್ ಇದ್ದರು.

RELATED ARTICLES
- Advertisment -
Google search engine

Most Popular